ನೌಕಾಪಡೆಗೆ ಬಲ ನೀಡಲು 111 ಹೆಲಿಕಾಫ್ಟರ್ ಸಂಗ್ರಹಣೆಗೆ ಕೇಂದ್ರ ಗ್ರೀನ್ ಸಿಗ್ನಲ್!

ಭಾರತೀಯ ನೌಕಾಪಡೆಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ ರಕ್ಷಣಾ ಇಲಾಖೆ 111 ಹೆಲಿಕಾಫ್ಟರ್ ಸಂಗ್ರಹಣೆಯ ಬೃಹತ್ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ...
ಹೆಲಿಕಾಫ್ಟರ್
ಹೆಲಿಕಾಫ್ಟರ್
ನವದೆಹಲಿ: ಭಾರತೀಯ ನೌಕಾಪಡೆಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ ರಕ್ಷಣಾ ಇಲಾಖೆ 111 ಹೆಲಿಕಾಫ್ಟರ್ ಸಂಗ್ರಹಣೆಯ ಬೃಹತ್ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. 
ಭಾರತೀಯ ನೌಕಾಪಡೆಗೆ 21,738 ಕೋಟಿ ವೆಚ್ಚದಲ್ಲಿ 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಸಂಗ್ರಹಣೆಗೆ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ರಕ್ಷಣಾ ಸ್ವಾಧೀನ ಕೌನ್ಸಿಲ್ ಸಭೆಯಲ್ಲಿ ದೀರ್ಘಾವಧಿಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 
16 ಯುಟಿಲಿಟಿ ಹೆಲಿಕಾಫ್ಟರ್ ಅನ್ನು ವಿದೇಶಿ ಹೆಲಿಕಾಫ್ಟರ್ ನಿರ್ಮಾಣದಲ್ಲಿ ಸಂಗ್ರಹಿಸಲಾಗುವುದು. ಇನ್ನು 95 ಹೆಲಿಕಾಫ್ಟರ್ ಗಳನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ತಯಾರಿಸಲಾಗುವುದು. ದೇಶೀಯ ರಕ್ಷಣಾ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸ್ಟ್ರೆಟಜಿಕ್ ಪಾಟ್ನರ್ ಶಿಪ್ ಮಾಡೆಲ್ ಅನ್ನು ಮೇ ತಿಂಗಳಲ್ಲಿ ಅನುಮೋದಿಸಲಾಗಿತ್ತು. ಇದೇ ಮಾಡೆಲ್ ಅಡಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಇದಕ್ಕೆ ಬರೋಬ್ಬರಿ 21,738 ಕೋಟಿ ರುಪಾಯಿ ವೆಚ್ಚವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com