ಗುಜರಾತ್ ಚುನಾವಣೆ: ಬಿಜೆಪಿ ಟಿಕೆಟ್‌ಗಾಗಿ ಕ್ಯೂನಿಂತ ಮುಸ್ಲಿಂರು

ದೇಶದ ಭವಿಷ್ಯದ ರಾಜಕಾರಣವನ್ನು ನಿರ್ಧರಿಸುವ ಗುಜರಾತ್ ವಿಧಾನಸಭೆ ಚುನಾವಣೆ ದಿನ ಕಳೆದಂತೆ ರಂಗೇರುತ್ತಿದ್ದು ಈ ಬಾರಿ ಚುನಾವಣೆಯಲ್ಲಿ...
ಮುಸ್ಲಿಂ
ಮುಸ್ಲಿಂ
ಅಹಮದಾಬಾದ್: ದೇಶದ ಭವಿಷ್ಯದ ರಾಜಕಾರಣವನ್ನು ನಿರ್ಧರಿಸುವ ಗುಜರಾತ್ ವಿಧಾನಸಭೆ ಚುನಾವಣೆ ದಿನ ಕಳೆದಂತೆ ರಂಗೇರುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಮುಸ್ಲಿಂರು ಕ್ಯೂನಲ್ಲಿದ್ದಾರೆ. 
ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂರಿಗೂ ಟಿಕೆಟ್ ನೀಡಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕಕವು ಇತ್ತೀಚೆಗೆ ನಡೆದ ಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಆಗ್ರಹ ಮುಂದಿಟ್ಟಿದೆ. 
2015ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ 350 ಮುಸ್ಲಿಂರು ಬಿಜೆಪಿಯಿಂದ ಗೆದ್ದು ಬಂದಿದ್ದರು. ಹೀಗಾಗಿ ಜಮಲ್ ಪುರ-ಕಾಡಿಯಾ, ವೆಜಲ್ಪುರ, ವಗ್ರಾ, ವಾಂಕನೇರ್, ಭುಜ್, ಅಬ್ ದಾಸಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಬೇಕು ಎಂದು ಅಲ್ಪಸಂಖ್ಯಾತ ಘಟಕವು ಆಗ್ರಹಿಸಿದೆ. 
2011ರಲ್ಲಿ ಮುಸ್ಲಿಂರನ್ನು ಆಕರ್ಷಿಸಲು ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಸದ್ಭಾವನಾ ಮಿಷನ್ ಸೇರಿದಂತೆ ಇತರ ಕಸರತ್ತು ನಡೆಸಿದ್ದರೂ 2012ರ ಚುನಾವಣೆ ಫಲಿತಾಂಶದಲ್ಲಿ ಮಹತ್ವದ ಪ್ರಭಾವ ಬೀರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಸ್ಲಿಂರಿಗೆ ಬಿಜೆಪಿ ಟಿಕೆಟ್ ನೀಡುತ್ತದೆಯೇ ಕಾದು ನೋಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com