ಜೆಟ್ ಏರ್ವೇಸ್
ದೇಶ
ಹೈಜಾಕ್ ಬೆದರಿಕೆ ಹಾಕಿದ್ದ ವ್ಯಕ್ತಿ ಜೆಟ್ ಏರ್ ವೇಸ್ ನ್ನು ದೂಷಿಸುವುದಕ್ಕಾಗಿಯೇ ಜಿರಳೆ ಕೊಂಡೊಯ್ದಿದ್ದ!
ಮುಂಬೈ-ದೆಹಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಬೆದರಿಕೆ ಸಂದೇಶ ಹಾಕಿ, ಹೈಜಾಕ್ ಮಡುವವರ ಬಗ್ಗೆ ಬರೆದಿದ್ದ ಗುಜರಾತ್ ನ ಚಿನ್ನಾಭರಣಗಳ ವ್ಯಾಪಾರಿ ಈ ಹಿಂದೆಯೂ ಹಲವು ಬಾರಿ....
ನವದೆಹಲಿ: ಮುಂಬೈ-ದೆಹಲಿ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಬೆದರಿಕೆ ಸಂದೇಶ ಹಾಕಿ, ಹೈಜಾಕ್ ಮಡುವವರ ಬಗ್ಗೆ ಬರೆದಿದ್ದ ಗುಜರಾತ್ ನ ಚಿನ್ನಾಭರಣಗಳ ವ್ಯಾಪಾರಿ ಈ ಹಿಂದೆಯೂ ಹಲವು ಬಾರಿ ಕಿರಿಕ್ ಮಾಡಿದ್ದ ಎಂದು ತಿಳಿದುಬಂದಿದೆ.
ಜೆಟ್ ಏರ್ವೇಸ್ ವಿರುದ್ಧ ಸೇಡು ಹೊಂದಿದ್ದ ಬ್ರಿಜು ಕಿಶೋರ್ ಸಲ್ಲಾ (30) ಈ ಹಿಂದೆ ಒಮ್ಮೆ ಜೆಟ್ ಏರ್ವೇಸ್ ನ್ನು ದೂಷಿಸುವ ಉದ್ದೇಶದಿಂದಲೇ ಜಿರಳೆ ತೆಗೆದುಕೊಂಡು ಹೋಗಿ, ವಿಮಾನದಲ್ಲಿ ಜಿರಳೆ ಇದೆ ಎಂದು ದೂಷಿಸಿದ್ದ, ನೈಜತೆ ತಿಳಿದ ಬಳಿಕ ಆತನಿಂದ ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಎಂಬ ಭರವಸೆ ಪಡೆದು ಬಿಡುಗಡೆ ಮಾಡಲಾಗಿತ್ತು.
ಜೆಟ್ ಏರ್ವೇಸ್ ನಲ್ಲಿ ಬೆದರಿಕೆ ಬರಹ ಕಾಣಿಸಿಕೊಂಡಿರುವುದಕ್ಕೂ ಸಹ ಬ್ರಿಜು ಕಿಶೋರ್ ಸಲ್ಲಾನೇ ಕಾರಣ ಎಂದು ಈಗ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದ್ದು, ಅಹಮಾದಾಬಾದ್ ಪೊಲೀಸರು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ