ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ವಿಳಂಬ ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗದಿಂದ ನೋಟೀಸ್ ಜಾರಿ

ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ವಿಳಂಬ ಮಾಡುವುದೇಕೆ ಎಂದು ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗವು ದೆಹಲಿ ದಕ್ಷಿಣ ಜಿಲ್ಲಾ ಪೋಲೀಸ್....
ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ವಿಳಂಬ ಪ್ರಶ್ನಿಸಿ ದೆಹಲಿ ಮಹಿಲಾ ಆಯೋಗದಿಂದ ನೋಟೀಸ್ ಜಾರಿ
ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ವಿಳಂಬ ಪ್ರಶ್ನಿಸಿ ದೆಹಲಿ ಮಹಿಲಾ ಆಯೋಗದಿಂದ ನೋಟೀಸ್ ಜಾರಿ
ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ವಿಳಂಬ ಮಾಡುವುದೇಕೆ ಎಂದು ಪ್ರಶ್ನಿಸಿ ದೆಹಲಿ ಮಹಿಳಾ ಆಯೋಗವು ದೆಹಲಿ ದಕ್ಷಿಣ ಜಿಲ್ಲಾ ಪೋಲೀಸ್ ಕಮಿಷನರ್ ಮತ್ತು ತಿಹಾರ್ ಜೈಲಿನ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದೆ.
"ಅಧಿಕಾರಿಗಳ ಈ ವರ್ತನೆಯು ನ್ಯಾಯ ಮತ್ತು ಕಾನೂನಿನ ಬಗ್ಗೆ ದೇಶದ ಜನರಿಗೆ ತಪ್ಪು ಸಂದೇಶವನ್ನು ನೀಡುತ್ತದೆ" ಎಂದು ಡಿಸಿ ಡಬ್ಲ್ಯು ಅಧ್ಯಕ್ಷೆ ಸ್ವಾತಿ ಜೈಹಿಂದ್ ಎ ಎನ್ ಐ ಗೆ ಹೇಳಿದರು.
"ಸಮಾಜ ಮತ್ತು ನ್ಯಾಯಾಲಯವು ಹೆಚ್ಚು ಹೆಚ್ಚು ನಿರ್ಭಯಾಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ "ಎಂದು ಅವರು ಹೇಳಿದರು.
ನಿರ್ಭಯಾ ಅವರ ತಾಯಿ ಆಶಾ ದೇವಿ ಡಿಸಿ ಡಬ್ಲ್ಯು ಗೆ ದೂರು ನೀಡಿದ ನಂತರ, ಆಯೋಗವು ನೋಟೀಸ್ ಜಾರಿ ಮಾಡಿದೆ.  ಸುಪ್ರೀಂ ಕೋರ್ಟ್ ತೀರ್ಪು ನೀಡಿ ಐದು ತಿಂಗಳ ಬಳಿಕವೂ ಮರಣದಂಡನೆ ಜಾರಿಗೊಳಿಸಲಾಗಿಲ್ಲ ಏಕೆ ಎಂದು ನೋಟೀಸಿನಲ್ಲಿ ಪ್ರಶ್ನಿಸಲಾಗಿದೆ
2012ರಲ್ಲಿ ನಡೆದಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಲ್ವರು ಅಪರಾಧಿಗಳಿಗೆ ಹೈಕೋರ್ಟ್ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮೇ 5ರಂದು ಖಾಯಂಗೊಳಿಸಿ ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com