ಜಮ್ಮು ಕಾಶ್ಮೀರ: ಈದ್ ಪ್ರಾರ್ಥನೆಯ ಬಳಿಕ ಯುವಕರು, ಭದ್ರತಾ ಸಿಬ್ಬಂದಿಗಳ ನಡುವೆ ಕಾಳಗ

ಈದ್ ಪ್ರಾರ್ಥನೆ ಮುಗಿದ ಬಳಿಕ ಕಾಶ್ಮೀರ ಕಣಿವೆಯ ಕೆಲವು ಸ್ಥಳಗಳಲ್ಲಿ ಯುವಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಸಂಭವಿಸಿವೆ
ಜಮ್ಮು ಕಾಶ್ಮೀರದಲ್ಲಿ ಈದ್ ಪ್ರಾರ್ಥನೆ ನಂತರ ಯುವಕರು, ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆಯಿತು.
ಜಮ್ಮು ಕಾಶ್ಮೀರದಲ್ಲಿ ಈದ್ ಪ್ರಾರ್ಥನೆ ನಂತರ ಯುವಕರು, ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆಯಿತು.
ಶ್ರೀನಗರ: ಈದ್ ಪ್ರಾರ್ಥನೆ ಮುಗಿದ ಬಳಿಕ ಕಾಶ್ಮೀರ ಕಣಿವೆಯ ಕೆಲವು ಸ್ಥಳಗಳಲ್ಲಿ ಯುವಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗ, ಅನಂತನಾಗ್‌ ಮತ್ತು ಸೋಪೋರ್‌ ನಲ್ಲಿ ಈದ್‌ ಪ್ರಾರ್ಥನೆಯ ಬಳಿಕ ಯುವಕರ ಗುಂಪುಗಳು ಭದ್ರತಾ ಸಿಬ್ಬಂದಿಗಳೊಡನೆ ಕಾದಾಟ ನಡೆಸಿದವು. 
ಕಾನೂನು ಸುವ್ಯವಸ್ಥೆಯನ್ನು ಕಾಯುವ ಸಲುವಾಗಿ ಮಸೀದಿಯ ಹೊರಗೆ ನಿಯೋಜಿತರಾಗಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ಪ್ರಾರ್ಥನೆ ಮುಗಿಸಿ ಹೊರಬಂದ ಯುವಕರ ಗುಂಪು ಕಲ್ಲೆಸೆಯಲು ಪ್ರಾರಂಭಿಸಿದಾಗ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ಮುಂದಾದರು. 
ಅನಂತನಾಗ್‌ನ ಜಂಗಲಾಟ್‌ ಮಂಡಿ, ಸೋಪೋರ್‌ನ ಜಾಮಿಯಾ ಮಸೀದಿ ಪ್ರದೇಶ ಈ ಬಗೆಯ ಸಂಘರ್ಷಕ್ಕೆ ಸಾಕ್ಷಿಯಾದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com