ರಥಯಾತ್ರೆ ವೇಳೆ ಅಡ್ವಾಣಿಯನ್ನು ಬಂಧಿಸಿದ್ದ ಮಾಜಿ ಐಎಎಸ್ ಅಧಿಕಾರಿ ಇಂದು ಮೋದಿ ಸಂಪುಟದಲ್ಲಿ ಸಚಿವ

ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಭೀಷ್ಮ ಎಂದೇ ಖ್ಯಾತರಾಗಿರುವ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಂಧಿಸಿದ್ದ ಅಧಿಕಾರಿಯೊಬ್ಬರು ಇಂದು ಪ್ರಧಾನಿ ನರೇಂದ್ರ ಮೋದಿ...
ಎಲ್ ಕೆ ಅಡ್ವಾಣಿ-ಆರ್ ಕೆ ಸಿಂಗ್
ಎಲ್ ಕೆ ಅಡ್ವಾಣಿ-ಆರ್ ಕೆ ಸಿಂಗ್
ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಭೀಷ್ಮ ಎಂದೇ ಖ್ಯಾತರಾಗಿರುವ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಂಧಿಸಿದ್ದ ಅಧಿಕಾರಿಯೊಬ್ಬರು ಇಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 
ಕೇಂದ್ರ ಸಂಪುಟದ ಸಚಿವರಾಗಿ ಮಾಜಿ ಐಎಎಸ್ ಅಧಿಕಾರಿ ರಾಜ್ ಕುಮಾರ್ ಸಿಂಗ್ ಅವರು 26 ವರ್ಷಗಳ ಹಿಂದೆ ಬಿಹಾರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದರು. ಇದೇ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಲಾಲ್ ಕೃಷ್ಣ ಅಡ್ವಾಣಿ ಅವರು ರಥಯಾತ್ರೆ ಹಮ್ಮಿಕೊಂಡಿದ್ದರು. 
1990ರಲ್ಲಿ ಗುಜರಾತ್ ನ ಸೋಮನಾಥ್ ನಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೂ ರಥಯಾತ್ರೆ ಆಯೋಜಿಸಲಾಗಿತ್ತು. ಈ ವೇಳೆ ಯಥಯಾತ್ರೆ ಬಿಹಾರಕ್ಕೆ ಬಂದು ತಲುಪಿದಾಗ ಅಂದು ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಥಯಾತ್ರೆಯನ್ನು ತಡೆದು ಅಡ್ವಾಣಿ ಅವರನ್ನು ಬಂಧಿಸುವಂತೆ ಆದೇಶಿಸುತ್ತಾರೆ. 
ಅಡ್ವಾಣಿ ಬಂಧನಕ್ಕೆ ಲಾಲೂ ಪ್ರಸಾದ್ ಇಬ್ಬರು ಅಧಿಕಾರಿಗಳನ್ನು ನೇಮಿಸುತ್ತಾರೆ. ಆ ಅಧಿಕಾರಿ ಬೈಕಿ ರಾಜ್ ಕುಮಾರ್ ಸಿಂಗ್ ಸಹ ಒಬ್ಬರು. ಇನ್ನು ಬಿಹಾರದ ಸಮಸ್ತಿಪುರ್ ನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ಅಡ್ವಾಣಿ ಅವರನ್ನು ಬಂಧಿಸಿ ಪಾಟ್ನಾಕ್ಕೆ ಕರೆದೊಯ್ತುತ್ತಾರೆ. 
ರಾಜ್ ಕುಮಾರ್ ಸಿಂಗ್ 1975ರ ಐಎಎಸ್ ಬ್ಯಾಚ್ ನ ಬಿಹಾರ ಕೇಡರ್ ನ ಅಧಿಕಾರಿಯಾಗಿದ್ದಾರೆ. 2014ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ರಾಜ್ ಕುಮಾರ್ ಸಿಂಗ್ ಬಿಹಾರದ ಆರ್ಹಹ್ ಕ್ಷೇತ್ರದಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com