ಹಿಮಾಚಲ ಪ್ರದೇಶ ಮುಖ್ಯಮಂತ್ರಿ ತೋಟದ ಮನೆ ಅಕ್ರಮ ಆಸ್ತಿ ಎಂದು ದೃಢ ಪಡಿಸಿದ ವಿಶೇಷ ಕೋರ್ಟ್

ಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧದ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಅವರ ತೋಟದ ಮನೆಯನ್ನು ಸೇರಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಆದೇಶವನ್ನು ವಿಶೇಷ ನ್ಯಾಯಾಲಯ ದೃಢಪಡಿಸಿದೆ.
ಹಿಮಾಚಲ ಪ್ರದೇಶ ಮು.ಮಂತ್ರಿ ವೀರಭದ್ರ ಸಿಂಗ್
ಹಿಮಾಚಲ ಪ್ರದೇಶ ಮು.ಮಂತ್ರಿ ವೀರಭದ್ರ ಸಿಂಗ್
ನವದೆಹಲಿ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧದ  ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತೋಟದ ಮನೆಯನ್ನು ಸೇರಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಆದೇಶವನ್ನು ವಿಶೇಷ ನ್ಯಾಯಾಲಯ ದೃಢಪಡಿಸಿದೆ.
ಕೇಂದ್ರ ತನಿಖಾ ಸಂಸ್ಥೆ ಮಾರ್ಚ್ ನಲ್ಲಿ ದಕ್ಷಿಣ ದೆಹಲಿಯ ಮೆಹ್ರಾಲಿ ಸಮೀಪದ ಡೇರಾ ಎನ್ನುವಲ್ಲಿನ ಆಸ್ತಿಯನ್ನು ಪ್ರಕರಣದಲ್ಲಿ ಸೇರಿಸಿತ್ತು, ಇದು "ಶೆಲ್ ಸಂಸ್ಥೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿದ ಹಣದಿಂದ ಖರೀದಿ ಮಾದಲಾದ ಆಸ್ತಿ" ಎಂದು ಆರೋಪಿಸಲಾಗಿತ್ತು.
ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ತಡೆಗಟ್ಟುವಿಕೆಯ ನಿಬಂಧನೆಗಳ ಅಡಿಯಲ್ಲಿ ಈ ತೋಟದ ಮನೆಗೆ ಸಂಬಂಧಿಸಿದಂತೆ ಪ್ರೊವೆನ್ಷಿಯಲ್ ಅಟ್ಯಾಚ್ ಮೆಂಟ್ ಆರ್ಡರ್ ನ್ನು  ಜಾರಿ ನಿರ್ದೇಶನಾಲಯ ಹೊರಡಿಸಿದೆ. ಪುಸ್ತಕದಲ್ಲಿನ ಆಸ್ತಿಯ ಮೌಲ್ಯ 6.61 ಕೋಟಿ ರೂ.ಗಳಾಗಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ಮೌಲ್ಯಮಾಪನದ ಪ್ರಕಾರ ಮಾರುಕಟ್ಟೆ ಮೌಲ್ಯವು 27.29 ಕೋಟಿ ರೂ.
ಪಿಎಂಎಲ್ಎಎದ ಅಡ್ಜುಡಿಕೇಟಿಂಗ್ ಪ್ರಾಧಿಕಾರವಾದ ಸದಸ್ಯ (ಕಾನೂನು) ಠಾಷರ್ ವಿ ಷಾ ಅವರ ಇತ್ತೀಚಿನ ಆದೇಶದಂತೆ, "ಅಕ್ರಮ ಹಣ ವರ್ಗಾವಣೆಯಲ್ಲಿ  ತೊಡಗಿದ್ದಾರೆ" ಎಂದು ಹೇಳಿದರು. ಹಾಗಾಗಿ, ಪಿಎಂಎಲ್ಎಯ ಸೆಕ್ಷನ್ 5 ರ ಉಪ-ಸೆಕ್ಷನ್ (1) ಅಡಿಯಲ್ಲಿರುವ ಅಕ್ರಮ ನಡೆದದ್ದನ್ನು ನಾನು ದೃಢೀಕರಿಸುತ್ತೇನೆ.
"ಪಿಎಂಎಲ್ಎಎ ನೇತೃತ್ವದಲ್ಲಿ ಅಪರಾಧಕ್ಕೆ ಸಂಬಂಧಿಸಿದಂತೆ ನಡೆದಿರುವ ಪ್ರಕರಣಗಳ ಬಾಕಿ ಸಮಯದಲ್ಲಿ ಈ ಪ್ರಕರಣವು ಮುಂದುವರೆಯಲಿದೆ" ಎಂದು ಮಾರ್ಚ್ 31 ರ ಇಡಿ ಆದೇಶದಲ್ಲಿ ದೃಢಪಡಿಸಿದೆ.
ಎಮ್ಎಮ್ ಮ್ಯಾಪಲ್ ಡೆಸ್ಟಿನೇಷನ್ ಮತ್ತು ಡ್ರಯಾಂಬುಯಿಲ್ಡ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ಹೆಸರಿನಲ್ಲಿ ಈ ತೋಟದ ಮನೆ ಇರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಈ ಸಂಸ್ಥೆಯಲ್ಲಿ ಸಿಂಗ್ ಅವರ ಮಗ ವಿಕ್ರಮಾದಿತ್ಯ ಪ್ರಮುಖ ಪಾಲುದಾರ ಮತ್ತು ಅವರ ಪುತ್ರಿ ಅಫ್ರಾಜಿಟಾ ಸಣ್ಣ ಪ್ರಮಾಣದ ಪಾಲುದಾರರಾಗಿದ್ದಾರೆ. ಈ ಇಬ್ಬರ ಹೆಸರು ಸಂಸ್ಥೆಯ ನಿರ್ದೇಶಕರ ಪಟ್ಟಿಯಲ್ಲಿಯೂ ಇದೆ ಎಂದು ಇಡಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com