ಪ್ರಧಾನಿ ಮೋದಿಗೆ ತಮ್ಮದೇ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಹಕ್ಕಿದೆ, ನಾನು ರೈತರ ಬಗ್ಗೆ ಮಾತನಾಡಿದ್ದೇನೆ: ಪಾಟೋಲ್

ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವುದನ್ನು ಇಷ್ಟ ಪಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ನಾನಾ ಪಾಟೋಲ್ ಈಗ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ
ನಾನಾ ಪಾಟೋಲ್- ಪ್ರಧಾನಿ ನರೇಂದ್ರ ಮೋದಿ
ನಾನಾ ಪಾಟೋಲ್- ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವುದನ್ನು ಇಷ್ಟ ಪಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ನಾನಾ ಪಾಟೋಲ್ ಈಗ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಾನು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮದೇ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಹಕ್ಕಿದೆ. ನಾನು ಮಾತನಾಡಿದ್ದು ರೈತರ ಸಮಸ್ಯೆಗಳ ದೃಷ್ಟಿಯಿಂದ, ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಕೃಷಿ ನನ್ನ ಜಾತಿ, ಕೃಷಿ ನನ್ನ ಧರ್ಮ, ನಾನು ರಾಜಕಾರಣಿಯ ಮಗನಲ್ಲ, ರೈತರ ಹಿತಾಸಕ್ತಿಯ ವಿಷಯ ಬಂದಾಗ ನಾನು ಪೊಲಿಟಿಕಲ್ ಕರೆಕ್ಟ್ ನೆಸ್ ನ ನಿಮಯಗಳನ್ನು ಪಾಲಿಸಲು ಇಚ್ಛಿಸುವುದಿಲ್ಲ, ಇದನ್ನು ಮಾಧ್ಯಮಗಳು ಸರಿಯಾದ ಗ್ರಹಿಕೆಯಿಂದ ವರದಿ ಮಾಡುವುದಿಲ್ಲ ಎಂದು ಸಂಸದ ನಾನಾ ಪಾಟೋಲ್ ಹೇಳಿದ್ದಾರೆ. 
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಾನಾ ಪಟೋಲೆ, "ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ರೈತರ ಆತ್ಮಹತ್ಯೆ ವಿಚಾರವಾಗಿ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಸ್ತಾಪಿಸಿ ಮೋದಿ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದೆ. ಆದರೆ, ತಮ್ಮನ್ನು ಪ್ರಶ್ನಿಸುವುದನ್ನು ಇಷ್ಟಪಡದ ಮೋದಿ ಅವರು ಪಕ್ಷದ ಸಿದ್ದಾಂತ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿದ್ದರೆ ಮಾತ್ರ ಮಾತನಾಡಿ ಎಂದು ನನ್ನನ್ನು ತಡೆದಿದ್ದರು" ಎಂಬ ಹೇಳಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com