ಸುಕ್ಮಾ: ಪೊಲೀಸ್ ಸಭೆಗೆ ಹಾಜರಾಗದಂತೆ ಗ್ರಾಮಸ್ಥರಿಗೆ ಮಾವೋವಾದಿಗಳ ಎಚ್ಚರಿಕೆ

ಸೆಪ್ಟಂಬರ್ 14 ರಂದು ನಡೆಯಲಿರುವ ಪೊಲೀಸರ ಸಭೆಯಲ್ಲಿ ಪಾಲ್ಗೋಳ್ಳದಂತೆ ಸುಕ್ಮಾ ಗ್ರಾಮಸ್ಥರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸುಕ್ಮಾ( ಛತ್ತೀಸಗಡ): ಸೆಪ್ಟಂಬರ್ 14 ರಂದು ನಡೆಯಲಿರುವ ಪೊಲೀಸರ ಸಭೆಯಲ್ಲಿ ಪಾಲ್ಗೋಳ್ಳದಂತೆ  ಸುಕ್ಮಾ ಗ್ರಾಮಸ್ಥರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ಮತ್ತು ಗ್ರಾಮಸ್ಥರ ಪರಸ್ಪರ ನಂಬಿಕೆಗಾಗಿ ಸಭೆ ಏರ್ಪಡಿಸಿದ್ದು, ಅದರಿಂದ ಹೊರಗುಳಿಯುವಂತೆ ಸುಕ್ಮಾ ಗ್ರಾಮಸ್ಥರಿಗೆ ಬೆದರಿಕೆ ಪತ್ರ ಬರೆಯಲಾಗಿದೆ. 
ಸೆಪ್ಟಂಬರ್ 7ರಂದು ಈ ಮೊದಲು ಸಭೆ ಆಯೋಜಿಸಲಾಗಿತ್ತು, ಆದರೆ  ಜಿಲ್ಲಾಧಿಕಾರಿ ರಜೆಯ ಮೇಲೆ ತೆರಳಿದ್ದ ಕಾರಣ ಸಭೆಯನ್ನು ಸೆಪ್ಟಂಬರ್ 14ಕ್ಕೆ ನಿಗದಿ ಪಡಿಸಲಾಗಿತ್ತು. 
ಪೊಡಿಯಂ ಫಂಡಾ ಎಂಬ ಮಾವೋವಾದಿ ಈ ವರ್ಷದ ಆರಂಭದಲ್ಲಿ ಎಸ್ ಪಿ ಅವರ ಮುಂದೆ ಶರಣಾಗಿದ್ದ. ಸಾಮಾನ್ಯ ಜನರು ಕ್ರಾಂತಿಯ ಭಾಗವಾಗದಂತೆ ಹೇಳಿದ್ದರು, ಪೋಡಿಯಂ ಪಂಡಾ ಪೊಲೀಸರ ಜೊತೆಗೆ ಸೇರಿಕೊಂಡು  ಜನರಿಗೆ ವಂಚಿಸುತ್ತಿದ್ದಾರೆ, ಕ್ರಾಂತಿಯಲ್ಲಿ  ಸಾಮಾನ್ಯ ಜನ ಭಾಗಿಯಾಗಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.
ಸುಕ್ಮಾ ಮೇಲೆ ನಡೆದ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ. ಜೊತೆಗೆ ಗ್ರಾಮಸ್ಥರು ಪಕ್ಕದ ಮಾರುಕಟ್ಟೆಗೂ ಭೇಟಿ ನೀಡಬಾರದು ಒಂದು ವೇಳೆ ಭೇಟಿ ನೀಡಿದರೆ ಕೊಲ್ಲುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com