ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭದ್ರತೆಗಾಗಿ ನಿಯೋಜಿತರಾಗಿದ್ದ ವಿಶೇಷ ಭದ್ರತಾ ಪಡೆಯ (ಎಸ್ ಪಿಜಿ) ಓರ್ವ ಕಮ್ಯಾಂಡೋ ಕಳೆದ 3 ದಿನಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
ಎಸ್ ಪಿಜಿ ಕಮ್ಯಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಕೇಶ್ ಕುಮಾರ್ ಸೆಪ್ಟೆಂಬರ್ 3 ರಿಂದ ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಕೇಶ್ ಕುಮಾರ್ ಅವರು ಸೆಪ್ಟೆಂಬರ್ 1 ರಂದು ಎಂದಿನಂತೆ 10 ಜನಪತ್ ನ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದು ನಂತರ ತಮ್ಮ ಸರ್ವಿಸ್ ರಿವಾಲ್ವರ್ ಮತ್ತು ಮೊಬೈಲ್ ಫೋನ್ ಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.ಅಲ್ಲಿಂದೀಚೆಗೆ ರಾಕೇಶ್ ವರ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ.
ಕೆಲಸದ ಒತ್ತಡವಿರಬಹುದು ಎಂದು ಕುಟುಂಬಸ್ಥರಗೂ ಸಹ ಪ್ರಾರಂಭದಲ್ಲಿ ಒಂದೆರಡು ದಿನ ಕಾದು ನೋಡಿದ್ದಾರೆ. ಆದರೆ ರಾಕೇಶ್ ಸುಳಿವಿರದ ಕಾರನ ಸೆಪ್ಟೆಂಬರ್ 3 ರಂದು ಕುಟುಂಬಸ್ಥರು ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿ ವಿಚಾರಿಸಿದಾಗ ರಾಕೇಶ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ರಾಕೇಶ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ದ್ವಾರಕಾ ಎನ್ನುವಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಪ್ರಕರಣ ದಾಕಲಿಸಿಕೊಂಡ ಪೋಲಿಸರು ತನಿಖೆ ಪ್ರಾರಂಭಿಸಿದ್ದಾರೆ.