ನವದೆಹಲಿ: ಬಂಡಾಯ ನಾಯಕ ಶರದ್ ಯಾದವ್ ಅವರ ವಿರುದ್ಧ ಮತ್ತೊಂದು ಕ್ರಮಕ್ಕೆ ಮುಂದಾಗಿರುವ ಜೆಡಿಯು, ಪಕ್ಷದ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅವರ ರಾಜ್ಯಸಭಾ ಸದಸ್ಯತ್ವನ್ನು ರದ್ದುಗೊಳಿಸುವಂತೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಮನವಿ ಮಾಡಿದೆ.
ಜೆಡಿಯು ಹಿರಿಯ ಸಂಸದರಾದ ಆರ್ ಸಿಪಿ ಸಿಂಗ್ ಹಾಗೂ ಸಂಜಯ್ ಜಾ ಅವರು ರಾಜ್ಯಸಭಾ ಅಧ್ಯಕ್ಷರಾಗಿರುವ ಎಂ ವೆಂಕಯ್ಯ ನಾಯ್ಡು ಅವರು ಸುಮಾರು 100 ಪುಟಗಳ ಮನವಿಯೊಂದನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಶರದ್ ಯಾದವ್ ಅವರನ್ನು ಪಕ್ಷದ ಸಂಸದೀಯ ನಾಯಕ ಸ್ಥಾನದಿಂದ ವಜಾಗೊಳಿಸಿದ್ದ ಜೆಡಿಯು ಈಗ ಅವರ ರಾಜ್ಯಸಭಾ ಸದಸ್ಯತ್ವವನ್ನೇ ಕಿತ್ತುಕೊಳ್ಳಲು ಮುಂದಾಗಿದೆ.
ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಆರ್ ಜೆಡಿ ಹಾಗೂ ಕಾಂಗ್ರೆಸ್ ನೊಂದಿಗೆ ಮೈತ್ರಿ ಮುರಿದುಕೊಂಡು ಬಿಜೆಪಿಯೊಂದಿಗೆ ಸರ್ಕಾರ ರಚಿಸಿರುವುದನ್ನು ಶರದ್ ಯಾದವ್ ಅವರು ಬಹಿರಂಗವಾಗಿಯೇ ವಿರೋಧಿಸಿದ್ದರು.