ಮೋದಿ ಸೂಕಿ ಭೇಟಿ: ಬಾರತ-ಮಾಯನ್ಮಾರ್ ಸಂಬಧಗಳ ಕುರಿತು ಚರ್ಚೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾಗಿದ್ದಾರೆ
ಮಯನ್ಮಾರ್ ರಾಜ್ಯದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ಹಸ್ತಲಾಘವ ಮಾಡುತ್ತಿರುವುದು
ಮಯನ್ಮಾರ್ ರಾಜ್ಯದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯೊಂದಿಗೆ ಹಸ್ತಲಾಘವ ಮಾಡುತ್ತಿರುವುದು
ಮಾಯನ್ಮಾರ್:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಯನ್ಮಾರ್ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾಗಿದ್ದಾರೆ ಇಬ್ಬರು ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಿದ್ದಾರೆ.
"ಮಾಯನ್ಮಾರ್ ನಲ್ಲಿ ಪ್ರಧಾನಿ ಮೋದಿ ಮತ್ತು ಕೌನ್ಸಿಲರ್ ಆಂಗ್ ಸಾನ್ ಸೂಕಿ ಭೇಟಿಯಾಗಿದ್ದಾರೆ, ಭಾರತ-ಮಯನ್ಮಾರ್ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಿಕೆ ಕುರಿತು ಚರ್ಚೆಯಾಗಿದೆ" ಎಂದು ಪಿಎಂಓ ಟ್ವಿಟ್ಟರ್ ನಲ್ಲಿ ಹೇಳಲಾಗಿದೆ.
ಪ್ರಧಾನ ಮಂತ್ರಿ ಮೋದಿ ಮಾಯನ್ಮಾರ್ ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಭೇಟಿಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ರಾಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದಾಗಲೇ ಪ್ರಧಾನ ಮಂತ್ರಿಯವರ ಮಾಯನ್ಮಾರ್ ಭೇಟಿ ಕುತೂಹಲ ಮೂಡಿಸಿದೆ.
ರೊಹಿಂಗ್ಯಾ ಗಳ ಜನಾಂಗೀಯ ಹಿಂಸೆಯ ಕುರಿತು ಉಭಯ ದೇಶದ ನಾಯಕರ ಮಾತುಕತೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ರೋಹಿಂಗ್ಯಾ ವಲಸಿಗರ ಬಗ್ಗೆ ಭಾರತೀಯ ಸರ್ಕಾರವೂ ಸಹ ಕಳವಳವನ್ನು ವ್ಯಕ್ತಪಡಿಸುತ್ತಿದೆ ಮತ್ತು ಅವರನ್ನು ಗಡೀಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಸುಮಾರು 40,000 ರೊಹಿಂಗ್ಯಾ ಗಳು ಭಾರತದಲ್ಲಿ ಅಕ್ರಮವಾಗಿ ಜೀವನ ಮಾಡುತ್ತಿದ್ದಾರೆ ಹೇಳಲಾಗಿದೆ.
ಭಯೋತ್ಪಾದನೆ, ಭದ್ರತೆ ಮತ್ತು ವ್ಯಾಪಾರ - ಹೂಡಿಕೆ, ಮೂಲಭೂತ ಸೌಕರ್ಯ ಮತ್ತು ಶಕ್ತಿ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುವ ಬಗ್ಗೆ ಭಾರತ ಮತ್ತು ಮಾಯನ್ಮಾರ್ ರಾಷ್ಟ್ರಗಳು ಗಮನ ನೀಡುತ್ತವೆ ಎನ್ನಲಾಗಿದೆ.
ಮೋದಿ  ಅವರು ತಮ್ಮ ಎರಡು ರಾಷ್ಟ್ರ ಪ್ರವಾಸದ ಎರಡನೇ ಹಂತದಲ್ಲಿ ಇಲ್ಲಿಗೆ ಆಗಮಿಸಿದ್ದಾರೆ.ಇದಕ್ಕೂ ಮುನ್ನ  ಅವರು ಆಗ್ನೇಯ ಚೀನೀ ನಗರ ಕ್ಸಿಯಾಮೆನ್ಗೆ ಭೇಟಿ ನೀಡಿದ್ದರು. ಅಲ್ಲಿ ಮೋದಿ ವಾರ್ಷಿಕ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇತರ ವಿಶ್ವ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com