ಲಕ್ನೋ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ, ಸಂಕಷ್ಟದಲ್ಲಿ ಪ್ರಯಾಣಿಕರು

ಲಕ್ನೋ ಮೆಟ್ರೋ ವಾಣಿಜ್ಯ ಸಂಚಾರದ ಮೊದಲ ದಿನವಾದ ಇಂದು ತಾಂತ್ರಿಕ ದೋಷ ಕಾಣಿಸಿಕೊಂದ ಕಾರಣ ಹಲವಾರು ಪ್ರಯಾಣಿಕರು ರೈಲಿನೊಳಗೆ ಬಂಧಿಗಳಾಗಿದ್ದಾರೆ ಎಂದು ಅಲ್ಲಿನ ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಉದ್ಘಾಟನೆಯ ನಂತರ ಲಕ್ನೋ ಮೆಟ್ರೊ ಮೊದಲ ಪ್ರಯಾಣ
ಉದ್ಘಾಟನೆಯ ನಂತರ ಲಕ್ನೋ ಮೆಟ್ರೊ ಮೊದಲ ಪ್ರಯಾಣ
ಲಕ್ನೋ: ಲಕ್ನೋ ಮೆಟ್ರೋ ವಾಣಿಜ್ಯ ಸಂಚಾರದ ಮೊದಲ ದಿನವಾದ ಇಂದು ತಾಂತ್ರಿಕ ದೋಷ ಕಾಣಿಸಿಕೊಂದ ಕಾರಣ ಹಲವಾರು ಪ್ರಯಾಣಿಕರು ರೈಲಿನೊಳಗೆ ಬಂಧಿಗಳಾಗಿದ್ದಾರೆ ಎಂದು ಅಲ್ಲಿನ ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಮಾವೈಯ ಬಳಿ ರೈಲು ನಿಲ್ಲಿಸಿದಾಗ ರೈಲಿನ ಎರಡೂ ದೀಪಗಳು ಆರಿಹೋಗಿತ್ತು, ರೈಲಿನಲ್ಲಿನ ಏರ್ ಕಂಡೀಷನಿಂಗ್ ಸಹ ಕೆಟ್ಟುಹೋಗಿತ್ತು..
ಲಕ್ನೋ ಮೆಟ್ರೋ ರೈಲು ಕಾರ್ಪೋರೇಶನ್ (ಎಲ್ಎಂಆರ್ಸಿ) ತುರ್ತು ನಿಗಾ ತಂದವು ರಕ್ಷಣಾ ಕಾರ್ಯ ಕೈಗೊಂಡಿದ್ದು  ತುರ್ತು ನಿರ್ಗಮನದ ದ್ವಾರದ ಮೂಲಕ ಪ್ರಯಾಣಿಕರನ್ನು ಕೆಳಕ್ಕಿಳಿಸಲಾಯಿತು.ಇಂದು ಮೊದಲ ಬಾರಿ ಮೆಟ್ರೋ ರೈಲು ಸಂಚಾರ ನಡೆಸುವ ಕಾರಣ ಜನರು ಅತ್ಯಂತ ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು.
"ಈ ಲೇನ ನಲ್ಲಿ ಕೆಲವು ದೋಷಗಳು ಪತ್ತೆಯಾಗಿದೆ. ನಾವು ಅದರ ಕುರಿತು ಕೆಲಸ ಮಾಡುತ್ತಿದ್ದೇವೆ, ಎಲ್ಲಾ ರೈಲುಗಳು ಇತರ ಸಮಾನಾಂತರ ಟ್ರ್ಯಾಕ್ ಮೇಲೆ ಚಲಿಸುತ್ತಿವೆ" ಎಂದು ಒಂದು ಎಲ್ಎಂಆರ್ಸಿ ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌ ಮೆಟ್ರೊದ ಮೊದಲ ಪ್ರಯಾಣವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗವರ್ನರ್ ರಾಮ್ ನಾಯ್ಕ್ ಸಹ ಉಪಸ್ಥಿತರಿದ್ದರು.
8.5-ಕಿಮೀ ಉದ್ದದ ಮೆಟ್ರೋ ಮಾರ್ಗವು ನಗರದಲ್ಲಿನ ಟ್ರಾನ್ಸ್ ಪೋರ್ಟ್ ನಗರದಿಂದ ಚಾರ್ ಭಾಗ್ ಗೆ  ತಲುಪುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com