1993ರ ಮುಂಬೈ ಸರಣಿ ಸ್ಫೋಟ: ಅಬು ಸಲೇಂ ಗೆ ಜೀವಾವಧಿ ಶಿಕ್ಷೆ, ರಹೀರ್ ಮರ್ಚೆಂಟ್ ಗೆ ಗಲ್ಲು

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಕುರಿತ ತೀರ್ಪು ಹೊರಬಿದ್ದಿದ್ದು ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮತ್ತೊಬ್ಬ ಅಪರಾಧಿ ರಹೀರ್ ಮರ್ಚೆಂಟ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಅಬು ಸಲೇಂ
ಅಬು ಸಲೇಂ
ಮುಂಬೈ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್  ಸ್ಫೋಟದ ಕುರಿತ ತೀರ್ಪು ಹೊರಬಿದ್ದಿದ್ದು ಪಾತಕಿ ಅಬು ಸಲೇಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮತ್ತೊಬ್ಬ ಅಪರಾಧಿ ರಹೀರ್ ಮರ್ಚೆಂಟ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಪ್ರಮುಖ ಅಪರಾಧಿ ಅಬುಸಲೇಂಗೆ ಜೀವಾವಧಿ ಶಿಕ್ಷೆ ಹಾಗೂ ಕರಾಮುಲ್ಲಾ ಖಾನ್​​ಗೂ ಜೀವಾವಧಿ ಜತೆಗೆ 2 ಲಕ್ಷ ರೂ ದಂಡ ವಿಧಿಸಿ ಮುಂಬೈನ ಟಾಡಾ ನ್ಯಾಯಾಲಯ ತೀರ್ಪು ನೀಡಿದೆ.

ಫಿರೋಜ್​ ಖಾನ್​​ ಮತ್ತು ತಾಹಿರ್​ ಮರ್ಚೆಂಟ್​​ಗೆ ಟಾಡಾ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಇನ್ನು ಸಿದ್ದಿಕೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಬುಸಲೇಂ ಸೇರಿ ಒಟ್ಟು ಐವರಿಗೆ ಇಂದು ಶಿಕ್ಷೆ ಪ್ರಕಟಗೊಂಡಿದೆ.
ಕರಿಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ರಿಯಾದ್ ಸಿದ್ಧಕಿಗೆ 10 ವರ್ಷಗಳ ಶಿಕ್ಷೆ ನೀಡಿ ಟಾಡಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದ ಮಾಸ್ಟರ್ ಮೈಂಡ್ ಮುಸ್ತಫಾ ದೊಸ್ಸಾ ಸೇರಿದಂತೆ ಆರು ಮಂದಿಗಳು ಅಪರಾಧಿಗಳು ಎಂದು ಹೇಳಿ ಜೂನ್ 16 ರಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. 
24 ವರ್ಷಗಳ ನಂತರ ಟಾಡಾ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದ 6ನೇ ಆರೋಪಿ ಮುಸ್ಥಪಾ ದೊಸ್ಸಾ ಸಾವನ್ನಪ್ಪಿದ್ದಾನೆ, ಅಬುಸಲೇಂ ನನ್ನು 2005 ರಲ್ಲಿ ಪೋರ್ಚುಗಲ್ ನಿಂದ ಬಂಧಿಸಿ ಕರೆತರಲಾಗಿತ್ತು, 1993ರಲ್ಲಿ ನಡೆದ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 713 ಮಂದಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com