ಅರುಣ್ ಜೇಟ್ಲಿ ಮಾನನಷ್ಟ ಪ್ರಕರಣ: ಎಎಪಿ ನಾಯಕನ ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್

ಕೇಂದ್ರ ಸಚಿವ ಅರುಣ್ ಜೇಟ್ಲಿಯ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಟ್ವೀಟ್ ನ್ನು ರಿಟ್ವೀಟ್ ಮಾಡಿದ ಕಾರನಕ್ಕೆ ತಾನು ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಗಿ ಬಂದಿದೆ
ಭಾರತದ ಸುಪ್ರೀಂಕೋರ್ಟ್
ಭಾರತದ ಸುಪ್ರೀಂಕೋರ್ಟ್
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿಯ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಟ್ವೀಟ್ ನ್ನು ರಿಟ್ವೀಟ್ ಮಾಡಿದ ಕಾರನಕ್ಕೆ ತಾನು ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಗಿ ಬಂದಿದೆ ಎಂದು ಎಎಪಿ ನಾಯಕ ರಾಘವ್ ಚಾಧಾ ಮಾಡಿಕೊಂದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಮಿತಾ ರಾಯ್ ಮತ್ತು ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಪೀಠವು ಆಮ್ ಆದ್ಮಿ ಪಕ್ಷದ ವಕ್ತಾರರಾದ ಚಧಾ ಅವರ ಅರ್ಜಿಯನ್ನು ತುರ್ತು ವಿಚಾರಣೆಗಾಗಿ ಪರಿಗಣಿಸಿದೆ. ಸೋಮವಾರದಿಂದ ಈ ಅರ್ಜಿಯ ವಿಚಾರಣೆ ಪ್ರಾರಂಭಿಸುವುದಾಗಿ ಪೀಠ ತಿಳಿಸಿದೆ.
ಹಿರಿಯ ವಕೀಲರಾದ ಆನಂದ್ ಗ್ರೋವರ್, ಚಾಧ ಅವರ ಪರವಾಗಿ ವಾದಿಸುತ್ತಾ, ಅರವಿಂದ ಕೇಜ್ರಿವಾಲ್ ರ ಕೆಲವು ಟ್ವೀಟ್ಗಳನ್ನು ಇವರು ರಿಟ್ವೀಟ್ ಮಾಡಿದ ಕಾರಣದಿಂದಾಗಿ ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರನ್ನು ಸಿಲುಕಿಸಲಾಗಿದೆ ಎಂದು ಆಪಾದಿಸಿದರು. 
"ಈ ಪ್ರಕರಣದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವ ಯಾವ ಅಂಶಗಳೂ ಇಲ್ಲ"ವೆಂದು ಗ್ರೋವರ್ ವಾದಿಸಿದರು. ಕೋರ್ಟ್ ಅದನ್ನು ಸೋಮವಾರ ಪರಿಶೀಲಿಸಲಿದೆ ಎಂದು ನ್ಯಾಯ ಪೀಠವು ಪುನರುಚ್ಚರಿಸಿತು.
ಕೇಜ್ರಿವಾಲ್ ಮತ್ತು ಇತರ ಎಎಪಿ ಮುಖಂಡರಾದ ರಾಘವ್ ಚಧಾ, ಕುಮಾರ್ ವಿಶ್ವಾಸ್, ಅಶುತೋಷ್, ಸಂಜಯ್ ಸಿಂಗ್ ಮತ್ತು ದೀಪಕ್ ಬಾಜ್ಪಾಯಿ ಅವರುಗಳು ಅರುಣ್ ಜೇಟ್ಲಿ ಭ್ರಷ್ಠಾಚಾರದಲ್ಲಿ ಪಾಲ್ಗೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡುತ್ತಿದ್ದರು. 2000 ನಿಂದ 2013ರ ವರೆಗಿನ ಕಾಲಾವಧಿಯಲ್ಲಿ ಅವರು ಮಾಡಿದ್ದ ಟ್ವೀಟ್ ಗಳನ್ನು ಪರಿಗಣಿಸಿ ಅರುಣ್ ಜೇಟ್ಲಿ ಎಎಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com