ಡೇರಾದ ಒಳಗೆ ಇದೇ ಪ್ಲಾಸ್ಟಿಕ್ ನಾಣ್ಯಗಳನ್ನು ಹಣದ ಬದಲಾಗಿ ಬಳಕೆ ಮಾಡಲಾಗುತ್ತಿತ್ತು, ಡೇರಾಗೆ ತೆರಳುವ ಭಕ್ತರು ಹಣ ನೀಡಿ ಈ ಪ್ಲಾಸ್ಟಿಕ್ ನಾಣ್ಯಗಳನ್ನು ಪಡೆಯಬೇಕಿತ್ತು ಎಂದು ಡೇರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗಳು ಹೇಳಿದ್ದಾರೆ. ಕಾರ್ಯಾಚರಣೆ ವೇಳೆ ಅತಿ ಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಕರೆನ್ಸಿ ಜೊತೆಗೆ ಹಾರ್ಡ್ ಡಿಸ್ಕ್, ನಗದನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.