ಟೆಲಿಫೋನ್ ಎಕ್ಸ್ ಚೆಂಜ್ ಹಗರಣ: ಮಾರನ್ ವಿರುದ್ಧ ಆರೋಪಪಟ್ಟಿ ದಾಖಲಿಸಿದ ಸಿಬಿಐ ಕೋರ್ಟ್

ಅಕ್ಟೋಬರ್ 3ರ ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಮಾರನ್ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದೆ.
ದಯಾನಿಧಿ ಮಾರನ್
ದಯಾನಿಧಿ ಮಾರನ್
ಚೆನ್ನೈ: ಅಕ್ಟೋಬರ್ 3ರ ಅಕ್ರಮ ಟೆಲಿಫೋನ್ ಎಕ್ಸ್ ಚೇಂಜ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಮಾರನ್ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿದೆ.
ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಮತ್ತು ನಾಲ್ವರು ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ದಯಾನಿಧಿ ಅವರ ಸಹೋದರ ಕಲಾನಿಧಿ ಸಿಬಿಐ ನ್ಯಾಯಾಲಯಕ್ಕೆಇದಕ್ಕೆ ಮುನ್ನವೇ ವೈಯುಕ್ತಿಕ ಮನವಿಯೊಂದನ್ನು ಸಲ್ಲಿಸಿದ್ದು ಅದರಲ್ಲಿ ಪ್ರಕರಣದ ಕುರಿತು ಪ್ರತ್ಯೇಕ ವಿವರ ಸಲ್ಲಿಸುವಂತೆ ಕೋರಿದ್ದರು.
2004-2007ರ ನಡುವೆ ಕೇಂದ್ರ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ ಅವರ ನಿವಾಸದಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ನ 764 ಹೈ-ಸ್ಪೀಡ್ ಡೇಟಾ ಲೈನ್ ಇರುವುದು ತಿಳಿದು ಬಂದಿತ್ತು. 
ಸನ್ ಟಿವಿ ಗಾಗಿ ಕಲಾನಿಧಿ ಹೆಸರಿನಲ್ಲಿ ಈ ಲೈನ್ ಗಳನ್ನು ಹಾಕಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿ ಯಾವ ಬಿಲ್ ಸಹ ಸಂದಾಯವಾಗಿಲ್ಲ. ಇದರಿಂದಾಗಿ ಖಜಾನೆಗೆ 1.78 ಕೋಟಿ ರೂ. ನಷ್ಟ ಉಂತಾಗಿದೆ ಎಂದು ಸಿಬಿಐ ಆರೋಪಿಸಿದೆ.
ದಯಾನಿಧಿ ಮಾರನ್ ಮತ್ತು ಕಲಾನಿಧಿ ಅವರಿಗೆ  ಕೇಸ್ ದಾಕ್ಯುಮೆಂಟ್ ಗಳ ಟೈಪ್ ಮಾಡಲಾದ ನಕಲುಗಳನ್ನು ಒದಗಿಸಲು ನ್ಯಾಯಾಲಯ ಆಗಸ್ಟ್ 11 ರಂದು ಸಿಬಿಐಗೆ ನಿರ್ದೇಶನ ನೀಡಿತ್ತು.
ದಯಾನಿಧಿ ಮಾರನ್ ನಿವಾಸದಲ್ಲಿ ಪಿಎಆರ್ಎ / ಬಿಆರ್ಎ / ಐಎಸ್ಡಿಎನ್ / ಲೀಸ್ಡ್ ಲೈನ್ ಇತ್ಯಾದಿಗಳನ್ನು ಹೊಂದಿರುವ ಹಲವಾರು ಉನ್ನತ-ದೂರಸಂಪರ್ಕ ಸೌಲಭ್ಯಗಳನ್ನು ಸ್ಥಾಪಿಸಿರುವ ಆರೋಪಗಳನ್ನು ಆರೋಪಪಟ್ಟಿಯಲ್ಲಿ  ದಾಖಲಿಸಿದೆ. 2004-07ರವರೆಗೆ ಬಿಲ್ ನೀದದೆ ಅಕ್ರಮವಾಗಿ ಈ ಸೌಲಭ್ಯಗಳನ್ನು ಬಳಸಿಕೊಂದ ಆರೋಪವನ್ನು ಇದೀಗ ಮಾರನ್ ಸೋದರರು ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com