ಜೆಎನ್ ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆ: ನಾಲ್ಕೂ ಸ್ಥಾನಗಳಲ್ಲಿ ಸಂಯುಕ್ತ ಎಡ ಮೈತ್ರಿಗೆ ಗೆಲುವು

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ನಡೆದ ಚುನಾವಣೆಯಲ್ಲಿ...
ಜೆಎನ್ ಯು ಕ್ಯಾಂಪಸ್ ಹೊರಗೆ ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು
ಜೆಎನ್ ಯು ಕ್ಯಾಂಪಸ್ ಹೊರಗೆ ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು
ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ನಡೆದ ಚುನಾವಣೆಯಲ್ಲಿ ಯುನೈಟೆ ಡ್ ಲೆಫ್ಟ್ ಮೈತ್ರಿಕೂಟದ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಧಾರಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ್ನು ಸೋಲಿಸಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ. 
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಯುಕ್ತ ಎಡ ಮೈತ್ರಿಕೂಟದ ಅಭ್ಯರ್ಥಿ ಗೀತಾ ಕುಮಾರಿ ಎಬಿವಿಪಿಯ ನಿಧಿ ತ್ರಿಪಾಟಿ ಅವರನ್ನು 464 ಮತಗಳಿಂದ ಸೋಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಬೆಳಗ್ಗೆ ಮಾತನಾಡಿದ ಗೀತಾ, ನನ್ನ ಈ ಗೆಲುವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಲ್ಲಬೇಕು. ಏಕೆಂದರೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತು ಅಂತರವನ್ನು ಕಾಪಾಡಿಕೊಂಡು ಬರಬೇಕು ಎಂಬ ನಂಬಿಕೆ ಮೇಲೆ ಜನರು ಇನ್ನೂ ಇದ್ದಾರೆ. ವಿದ್ಯಾರ್ಥಿಗಳಿಂದ ಮಾತ್ರ ವಿರೋಧವಿದೆ ಎಂದು ಹೇಳಿದರು. 
ವಿಶ್ವವಿದ್ಯಾಲಯದ ನಜೀಬ್ ವಿಷಯ, ಜೆಎನ್ ಯು ಸೀಟು ಹಂಚಿಕೆ, ಹೊಸ ಹಾಸ್ಟೆಲ್ ಗಳು, ಸ್ವಾಯತ್ತತೆ ಕಾಪಾಡುವಿಕೆ ಮೊದಲಾದ ವಿವಾದಗಳನ್ನು ಬಗೆಹರಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಾಪ್ಸಾದ ಶಬಾನಾ ಆಲಿಗೆ 935 ಮತಗಳು ಲಭಿಸಿದೆ. ಒಟ್ಟು 4,639 ಮತಗಳು ಚಲಾವಣೆಯಾದದ್ದರಲ್ಲಿ 4,620 ಮತಗಳು ಮೌಲ್ಯಯುತವಾಗಿದ್ದು 19 ಮತಗಳು ಅಸಿಂಧುಗೊಂಡವು ಎಂದು ಚುನಾವಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಉಪಾಧ್ಯಕ್ಷ ಚುನಾವಣೆಯಲ್ಲಿ ಐಸಾದ ಸಿಮೊನ್ ಜೊಯಾ ಖಾನ್ ಗೆ 1,876   ಮತಗಳು ಲಭಿಸಿದವು. ಖಾನ್ ಎಬಿವಿಪಿಯ ದುರ್ಗೇಶ್ ಕುಮಾರ್ ಅವರನ್ನು 1028 ಮತಗಳಿಂದ ಸೋಲಿಸಿದರು.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಮತದಾನದಲ್ಲಿ ಎಡ ರಂಗದ ದುಗ್ಗಿರಾಲ ಶ್ರೀಕೃಷ್ಣ ಅವರು 2,082 ಮತಗಳನ್ನು ಪಡೆದರೆ ಎಬಿವಿಪಿಯ ನಿಕುಂಜ್ ಮಕವಾನಾ 975 ಮತಗಳನ್ನು ಪಡೆದಿದ್ದಾರೆ.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಮತದಾನದಲ್ಲಿ ಎಡರಂಗದ ಸುಭಾಂಶು ಸಿಂಗ್ 1755 ಮತಗಳನ್ನು ಮತ್ತು ಎಬಿವಿಪಿಯ ಪಂಕಜ್ ಕೇಶರಿ 920 ಮತಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com