ಮಧ್ಯಪ್ರದೇಶ ಸರ್ಕಾರದಿಂದ ಐಎಎಸ್ ಅಧಿಕಾರಿ ಶಶಿ ಕರ್ನಾವತ್ ವಜಾ

ನಾಲ್ಕು ವರ್ಷಗಳ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಶಶಿ ಕರ್ನಾವತ್....
ಶಶಿ ಕರ್ನಾವತ್
ಶಶಿ ಕರ್ನಾವತ್
ಭೋಪಾಲ್: ನಾಲ್ಕು ವರ್ಷಗಳ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಅಮಾನತುಗೊಂಡ ಐಎಎಸ್ ಅಧಿಕಾರಿ ಶಶಿ ಕರ್ನಾವತ್ ಅವರನ್ನು ಮಧ್ಯಪ್ರದೇಶ ಸರ್ಕಾರ ಸೋಮವಾರ ಸೇವೆಯಿಂದ ವಜಾಗೊಳಿಸಿದೆ.
1969ರ ಅಖಿಲ ಭಾರತ ಸೇವಾ ನಿಯಮದಡಿ ಶಶಿ ಕರ್ನಾವತ್ ಅವರನ್ನು ಸೇವೆಯಿಂದ ವಜಾಗೊಳಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿದ್ದ ದಲಿತ ಐಎಎಸ್‌ ಅಧಿಕಾರಿ ಶಶಿ ಕರ್ನಾವತ್‌ಗೆ ಮಧ್ಯ ಪ್ರದೇಶದ ಮಾಂಡ್ಲಾ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರುಪಾಯಿ ದಂಡ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು 2013ರಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಬಳಿಕ ಹೈಕೋರ್ಟ್‌ಗೆ ಮೊರೆ ಹೋಗಿ ಜಾಮೀನು ಪಡೆದಿದ್ದರು.
ರಾಜ್ಯ ನಾಗರಿ ಸೇವೆ ಅಧಿಕಾರಿಯಾಗಿದ್ದ ಶಶಿ ಕರ್ನಾವತ್ ಅವರು 1999ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com