ಜನ್ ಧನ್ ಶೂನ್ಯ ಠೇವಣಿ ಖಾತೆಗಳು ಶೇ.77 ರಿಂದ ಶೇ.20 ಕ್ಕೆ ಇಳಿಕೆ: ಅರುಣ್ ಜೇಟ್ಲಿ

3 ವರ್ಷಗಳ ಹಿಂದೆ ಪ್ರಾರಂಭವಾದ ಜನ್-ಧನ್ ಯೋಜನೆಯಡಿ ಈ ವರೆಗೂ 30 ಕೋಟಿ ಕುಟುಂಬಗಳು ಬ್ಯಾಂಕ್ ಖಾತೆಯನ್ನು ಪಡೆದಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: 3 ವರ್ಷಗಳ ಹಿಂದೆ ಪ್ರಾರಂಭವಾದ ಜನ್-ಧನ್ ಯೋಜನೆಯಡಿ ಈ ವರೆಗೂ 30 ಕೋಟಿ ಕುಟುಂಬಗಳು ಬ್ಯಾಂಕ್ ಖಾತೆಯನ್ನು ಪಡೆದಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಜನ್-ಧನ್ ಯೋಜನೆ ಜಾರಿಯಾಗುವುದಕ್ಕೂ ಮುನ್ನ ಶೇ.42 ರಷ್ಟು ಕುಟುಂಬಗಳು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಜೋಡಣೆಯಾಗಿರಲಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ. ಫೈನಾನ್ಷಿಯಲ್ ಇನ್ಕ್ಲೂಷನ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅರುಣ್ ಜೇಟ್ಲಿ,  ಜನ್-ಧನ್ ಯೋಜನೆ ಜಾರಿಯಾದಾಗಿನಿಂದ ಶೂನ್ಯ ಠೇವಣಿ ಖಾತೆಗಳು ಶೇ.77 ರಿಂದ ಶೇ.20 ಕ್ಕೆ ಇಳಿಕೆಯಾಗಿವೆ. ಒಮ್ಮೆ ನೇರ ಪಾವತಿ ಸೌಲಭ್ಯ ಜಾರಿಯಾದರೆ ಶೇ.20 ರಷ್ಟು ಖಾತೆಗಳೂ ಸಹ ವಹಿವಾಟು ನಡೆಸಲಿವೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ. 
2014 ರಲ್ಲಿ ಜನ್-ಧನ್ ಯೋಜನೆ ಜಾರಿಯಾದ ಮೂರು ತಿಂಗಳ ಬಳಿಕ ಶೇ.77 ರಷ್ಟು ಶೂನ್ಯ ಠೇವಣಿ ಖಾತೆಗಳಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com