ಜಪಾನ್ ಪ್ರಧಾನಿ ಶಿಂಜೋ ಅಬೆ, ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಮೋದಿ ಜಾಕೆಟ್ ಎಂದೇ ಪ್ರಸಿದ್ಧವಾಗಿರುವ ಕುರ್ತಾ-ಪೈಜಾಮ ಧರಿಸಿ ಗಮನ ಸೆಳೆದಿದ್ದೂ ಸಹ ಅವರಿಬ್ಬರಲ್ಲಿರುವ ಆತ್ಮೀಯತೆಯನ್ನು ತೋರುತ್ತದೆ. ಅಷ್ಟೇ ಅಲ್ಲ. ಜಪಾನ್ ಪ್ರಧಾನಿ ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿ ಅತ್ಮೀಯ ಅಪ್ಪುಗೆಯಿಂದ ಬರಮಾಡಿಕೊಂಡಿದ್ದ ಮೋದಿಯೇ, ಶಿಂಜೋ ಅಬೆ ಎಲ್ಲಿ ಉಳಿದುಕೊಳ್ಳಬೇಕು, ಏನನ್ನು ತಿನ್ನಬೇಕು, ಎಲ್ಲೆಲ್ಲಿಗೆ ಭೇಟಿ ನೀಡಬೇಕೂ ಎಂಬುದನ್ನೂ ಆಯ್ಕೆ ಮಾಡಿದ್ದು, ಜಪಾನ್ ಪ್ರಧಾನಿಗಾಗಿ ಮೋದಿಯ ಆಯ್ಕೆಗಳು ಈಗ ಸದ್ಯಕ್ಕೆ ಅತ್ಯಂತ ಹೆಚ್ಚು ಗಮನ ಸೆಳೆದಿರುವ ವಿಷಯವಾಗಿದೆ.