ಪೋಸ್ಟ್ ಆಫೀಸ್ ನಲ್ಲಿ ನೋಟು ವಿನಿಮಯ ವಿಚಾರ, ತನಿಖೆಗೆ ಕೇಂದ್ರೀಯ ಮಾಹಿತಿ ಆಯೋಗದ ಶಿಫಾರಸು

ಅಪನಗದಿಕರಣ ಪರಿಣಾಮ ನಿಷೇಧಕ್ಕೆ ಒಳಗಾದ ನೋಟುಗಳನ್ನು ಅಂಚೆ ಕಛೇರಿಗಳಲ್ಲಿ ಬದಲಾಯಿಸಿಕೊಳ್ಳಲಾಗಿದೆ.......
ಪೋಸ್ಟ್ ಆಫೀಸ್ ನಲ್ಲಿ ನೋಟು ವಿನಿಮಯ
ಪೋಸ್ಟ್ ಆಫೀಸ್ ನಲ್ಲಿ ನೋಟು ವಿನಿಮಯ
ನವದೆಹಲಿ: ಅಪನಗದಿಕರಣ ಪರಿಣಾಮ ನಿಷೇಧಕ್ಕೆ ಒಳಗಾದ ನೋಟುಗಳನ್ನು ಅಂಚೆ ಕಛೇರಿಗಳಲ್ಲಿ ಬದಲಾಯಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು ಇದರ ಕುರಿತಂತೆ ತನಿಖೆ ನಡೆಸಬೇಕೆಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ ) ತಿಳಿಸಿದೆ.
ಓಲ್ಡ್ ಪಿಂಟೊ ಪಾರ್ಕ್ ನ ಕೇಂದ್ರ ಸರ್ಕಾರಿ ನೌಕರರ ಕಲ್ಯಾಣ ಸಂಘದ ವಸತಿ ಸಮುಚ್ಚಯದ ನಿವಾಸಿಗಳು ಈ ನೋಟು ಬದಲಾವಣೆಯ ತಪ್ಪಿತಸ್ಥರಾಗಿದ್ದಾರೆ.ಎನ್ನಲಾಗಿದೆ.
ಅವರು ಎರಡು ಅಂಚೆ ಕಛೇರಿಗಳಲ್ಲಿ ನಿಷೇಧಿತ ನೋಟನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಇದೀಗ ಸಿಐಸಿ ತನಿಖೆಗೆ ಆದೇಶಿಸಿರುವ ಕಾರಣ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಆರ್ ಟಿಐ ಅರ್ಜಿದಾರರಾದ ರಾಮ್ ಸ್ವರೂಪ್ ಈಗ ಸಿಐಸಿಗೆ ಸಲ್ಲಿಸಿದ ದಾಖಲೆಗಳ ಪ್ರಕಾರ ಕಳೆದ ವರ್ಷಅಪನಗದಿಕರಣ ಆದ ದಿನಗಳಲ್ಲಿ ಹೊರ ಪ್ರದೇಶದ ಯಾರಿಗೂ ಈ ವಸತಿ ಪ್ರದೇಶಕ್ಕೆ ಬರುವುದನ್ನು ನಿರ್ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com