ತಿರುವನಂತಪುರಂ: ಪದ್ಮನಾಭ ಸ್ವಾಮಿಯ ದೇವಾಲಯದಲ್ಲಿ ಕಾಣೆಯಾಗಿದ್ದ ವಜ್ರದ ಹರಳುಗಳು ಪತ್ತೆ

ಇಲ್ಲಿನ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ವರ್ಷಗಳ ಹಿಂದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಕೋಟ್ಯಂತರ ರೂ........
ಪದ್ಮನಾಭ ಸ್ವಾಮಿಯ ದೇವಾಲಯ
ಪದ್ಮನಾಭ ಸ್ವಾಮಿಯ ದೇವಾಲಯ
Updated on
ತಿರುವನಂತಪುರಂ: ಇಲ್ಲಿನ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ವರ್ಷಗಳ ಹಿಂದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಕೋಟ್ಯಂತರ ರೂ. ಮೌಲ್ಯದ 12 ವಜ್ರದ ಹರಳುಗಳು ಆಶ್ಚರ್ಯಕರ ರೀತಿಯಲ್ಲಿ ದೇವಾಲಯದ ಆವರಣದಲ್ಲಿಯೇ ಪತ್ತೆಯಾಗಿವೆ.ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುವ ಸಮಯದಲ್ಲಿಯೇ ಹರಳುಗಳು ಪತ್ತೆಯಾಗಿವೆ.
ಬೆಲೆಬಾಳುವ ವಜ್ರ, ಚಿನ್ನಾಭರಣಗಳನ್ನು ಹೊಂದಿರುವ ಅನಂತ ಪದ್ಮನಾಭನಿಗೆ ಸೇರಿದ ಆಭರಣಗಳಲ್ಲಿದ್ದ ಈ ವಜ್ರದ ಹರಳುಗಳು ನಾಪತ್ತೆಯಾಗಿದ್ದವು. ಅಲಂಕಾರದ ವೇಳೆ ಬಳಸ ಲಾಗುತ್ತಿದ್ದ ವಜ್ರದ ಹರಳುಗಳು ವರ್ಷದ ಹಿಂದೆ ಕಾಣದೇ ಇದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತನಿಕಾ ತಂದಕ್ಕೆ ಈವರೆಗೆ 12ರ ಬದಲಿಗೆ 26 ವಜ್ರದ ಹರಳುಗಳು ಲಭಿಸಿವೆ. ಇದು ಹೇಗೆ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲವಾಗಿದೆ. ಆಭರಣಗಳಿಗೆ ಅಂಟಿಸಿದ ಹರಳುಗಳು ಎಷ್ಟು ಎನ್ನುವ ಲೆಕ್ಕಾಚಾರ ಇಲ್ಲದೇ ಇದ್ದದ್ದರಿಂದ ಅವು ಕಳೆದು ಹೋದಾಗಲೂ ಸುದ್ದಿಯಾಗಿರಲಿಲ್ಲ. ಈಗ ಅವೆಲ್ಲವೂ ಲಭಿಸಿವೆ. ಮೇಲ್ನೋಟಕ್ಕೆ ಇದು ಕಳ್ಳತನ ಪ್ರಕರಣದಂತೆ ಕಾಣಿಸುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾಗಿರುವ ವಜ್ರಗಳ ಮೌಲ್ಯ ಹಲವು ಕೋಟಿ ರೂ.ಗಳಿಗೂ ಮಿಗಿಲಾಗದೆ. ಆದರೆ ನಿಖರ ಮೊತ್ತ ಹೇಳಲು ಸಾಧ್ಯವಾಗದು ಎಂದಿರುವ ಅಧಿಕಾರಿಗಳು, ಯಾರ ಗಮನಕ್ಕೂ ಬಾರದೇ ಕಳೆದು ಹೋಗಿರುವ ಇನ್ನಷ್ಟು ವಜ್ರಗಳ ಪತ್ತೆಗೆ ಶೋಧ ಮುಂದುವರೆದಿದೆ ಎಂದಿದ್ದಾರೆ.
ದೇಗುಲದಿಂದ ವಜ್ರಗಳು ಕಾಣೆಯಾಗಿದ್ದ ಬಗ್ಗೆ ಕಳೆದ ಜುಲೈಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಪರ ವಾದ ನಡೆಸುತ್ತಿರುವ ಹಿರಿಯ ವಕೀಲ ಗೋಪಾಲ್‌ ಸುಬ್ರಹ್ಮಣ್ಯಂ ಅವರು, ವಜ್ರಗಳು ಕಾಣೆಯಾದ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಇದಕ್ಕೆ ದೇಗುಲದ ನಿರ್ಲಕ್ಷ್ಯ ದ ನಿರ್ವಹಣೆಯೇ ಕಾರಣ ಎಂದು ಹೇಳಿದ್ದರು. 
ಎರಡು ವರ್ಷದ ಹಿಂದೆ ತಪಾಸಣೆ ವೇಳೆ ಪದ್ಮನಾಭ ದೇವಸ್ಥಾನದ ನೆಲಮಾಳಿಗೆಯಲ್ಲಿ ಅಮೂಲ್ಯ ವಜ್ರ ಹಾಗೂ ಚಿನ್ನಾಭರಣ ತುಂಬಿದ ನಾಲ್ಕು ಕೊಠಡಿಗಳು ಪತ್ತೆಯಾಗಿದ್ದು ಆ ಮೂಲಕ ದೇಶದ ಗಮನ ಸೆಳೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com