2022 ರ ವೇಳೆಗೆ ನವ ಭಾರತ ನಿರ್ಮಾಣಕ್ಕಾಗಿ ಯಾವುದೇ ಅವಕಾಶವನ್ನೂ ಬಿಡುವುದಿಲ್ಲ: ಪ್ರಧಾನಿ ಮೋದಿ

2022 ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು, ನವ ಭಾರತ ನಿರ್ಮಾಣಕ್ಕಾಗಿ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ
ಅಹಮದಾಬಾದ್: 2022 ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು, ನವ ಭಾರತ ನಿರ್ಮಾಣಕ್ಕಾಗಿ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ದಾರ್‌ ಸರೋವರ್‌ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ದಾರ್ ಪಟೇಲ್ ಹಾಗೂ ಡಾ.ಅಂಬೇಡ್ಕರ್ ಅವರನ್ನು ನಾವು ಇಂದು ಸ್ಮರಿಸುತ್ತೇವೆ. ಸರ್ದಾರ್ ಸರೋವರ್ ಅಣೆಕಟ್ಟೆಗೆ ಹಲವು ಅಡೆತಡೆಗಳು ಬಂದರೂ ಯೋಜನೆಯನ್ನು ಯಶಸ್ವಿಗೊಳಿಸಲು ನಾವು ಬದ್ಧರಾಗಿದ್ದೆವು ಎಂದು ಮೋದಿ ತಿಳಿಸಿದ್ದಾರೆ. 
ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ಪೂರ್ಣಗೊಳಿಸಲು ಗುಜರಾತ್ ನ ಸಾಧು ಸಂತರು ಮಹತ್ವದ ಪಾತ್ರ ವಹಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಗಡಿ ಪ್ರದೇಶಗಳಿಗೆ ತೆರಳಿದಾಗ ಬಿಎಸ್ ಎಫ್ ಯೋಧರಿಗೆ ನೀರಿರಲಿಲ್ಲ. ಆದ್ದರಿಂದ ನರ್ಮದಾ ನದಿ ನೀರನ್ನು ಗಡಿ ಪ್ರದೇಶಗಳಿಗೆ ಹರಿಸಿದ್ದೆವು, ಅಭಿವೃದ್ಧಿಯ ವೇಗ ಕಡಿಮೆಯಾಗುವುದಕ್ಕೆ ನೀರಿನ ಮೂಲಸೌಕರ್ಯದ ಕೊರತೆಯೂ ಪ್ರಮುಖ ಅಂಶವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. 
ಸರ್ದಾರ್ ಸರೋವರ್ ಯೋಜನೆಯಿಂದ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com