ಬಯಲು ಶೌಚ: ಮಧ್ಯಪ್ರದೇಶದ ಕುಟುಂಬವೊಂದಕ್ಕೆ 75,000 ರೂ ದಂಡ!

ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಬಯಲು ಶೌಚ ಪದ್ಧತಿಯನ್ನು ಬಿಡದ ಕುಟುಂಬವೊಂದಕ್ಕೆ ಮಧ್ಯಪ್ರದೇಶದ ಗ್ರಾಮ ಪಂಚಾಯತ್ 75,000 ರೂಪಾಯಿ ದಂಡ ವಿಧಿಸಿದೆ.
ಬಯಲು ಶೌಚ
ಬಯಲು ಶೌಚ
ಭೋಪಾಲ್: ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಬಯಲು ಶೌಚ ಪದ್ಧತಿಯನ್ನು ಬಿಡದ ಕುಟುಂಬವೊಂದಕ್ಕೆ ಮಧ್ಯಪ್ರದೇಶದ ಗ್ರಾಮ ಪಂಚಾಯತ್ 75,000 ರೂಪಾಯಿ ದಂಡ ವಿಧಿಸಿದೆ. 
 ರಂಬಾಖೇದಿ ಗ್ರಾಮದಲ್ಲಿ ಕುಟುಂಬವೊಂದರ 10 ಜನರು ಮನೆಯಲ್ಲಿ ಶೌಚಾಲಯ ನಿರ್ಮಾಣವಾಗಿದ್ದರೂ ಸಹ ಬಯಲಿನಲ್ಲಿಯೇ ಶೌಚ ಮಾಡುತ್ತಿದ್ದರು, ಪದೇ ಪದೇ ಎಚ್ಚರಿಕೆ ನೀಡಿದ್ದರ ಹೊರತಾಗಿಯೂ ಸಹ ಮನೆಯಲ್ಲಿನ ಶೌಚಾಲಯವನ್ನು ಬಳಕೆ ಮಾಡದ ಹಿನ್ನೆಲೆಯಲ್ಲಿ  75,000 ರೂ ದಂಡ ವಿಧಿಸಲಾಗಿದೆ.. 
10 ಜನರಿಗೆ ಪ್ರತಿ ದಿನಕ್ಕೆ 250 ರೂಪಾಯಿಯಂತೆ ಒಂದು ತಿಂಗಳಿಗೆ ಒಟ್ಟು 75,000 ರೂಪಾಯಿಗಳಷ್ಟು ದಂಡ ವಿಧಿಸಲಾಗಿದೆ. ಇನ್ನು 43 ಕುಟುಂಬಗಳಿಗೆ ಬಯಲು ಶೌಚವನ್ನು ತ್ಯಜಿಸುವಂತೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com