ಕೇಂದ್ರ ಸರ್ಕಾರಿ ನೌಕರರಿಗಾಗಿ ಬರಲಿದೆ ಪಿಂಚಣಿ ಕುರಿತ ಸರ್ಕಾರಿ ಆ್ಯಪ್

ನಿವೃತ್ತಿ ಹೊಂದಲಿರುವ ಕೇಂದ್ರ ಸರ್ಕಾರಿ ನೌಕರರಿಗಾಗಿ ತಮ್ಮ ಪೆನ್‌ಶನ್‌ ಮತ್ತಿತರ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು........
ಸರ್ಕಾರಿ ನೌಕರರಿಗಾಗಿ ಪಿಂಚಣಿ ಆ್ಯಪ್
ಸರ್ಕಾರಿ ನೌಕರರಿಗಾಗಿ ಪಿಂಚಣಿ ಆ್ಯಪ್
ನವದೆಹಲಿ: ನಿವೃತ್ತಿ ಹೊಂದಲಿರುವ ಕೇಂದ್ರ ಸರ್ಕಾರಿ ನೌಕರರಿಗಾಗಿ ತಮ್ಮ ಪೆನ್‌ಶನ್‌ ಮತ್ತಿತರ ವಿಲೇವಾರಿ ಕುರಿತ ವಿಷಯಗಳ ತಾಜಾ ಮಾಹಿತಿಗಳನ್ನು ಬೆರಳ ತುದಿಯಲ್ಲೇ ಪಡೆಯಲುಅನುಕೂಲ ಮಾಡಿಕೊಡುವ ಆ್ಯಪ್ ಒಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. 
ನಾಳೆ ಈ ಆ್ಯಪ್ ಬಿಡುಗಡೆಯಾಗಲಿದ್ದು, ಪಿಂಚಣಿ ಕುರಿತಾದ ಸಂಪೂರ್ನ ಮಾಹಿತಿ ಈ ಆ್ಯಪ್​ನಲ್ಲಿ ಅಡಕವಾಗಿರುತ್ತದೆ.
ಪಿಂಚಣಿ ಲೆಕ್ಕಾಚಾರಗಳನ್ನು ತಿಳಿಯುವುದರೊಂದಿಗೆ ತಮ್ಮ ಯಾವುದೇ ದೂರುದುಮ್ಮಾನಗಳನ್ನು ಸರ್ಕಾರಕ್ಕೆ ತಿಳಿಸಲು ಅನುಕೂಲವಿರುವ ಈ ನೂತನ ಆ್ಯಪ್‌ ನಿವೃತ್ತರಾಗಲಿರುವ ಕೇಂದ್ರ ಸರಕಾರಿ ನೌಕರರಿಗೆ ತುಂಬಾ ಪ್ರಯೋಜನಕಾರಿಯಾಗಬಲ್ಲುದು ಎಂದು ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್‌ಶನ್‌ ಸಚಿವಾಲಯದ ಪ್ರಕಟನೆ ತಿಳಿಸಿದೆ. 
ಸಚಿವಾಲಯ ಈಗಾಗಲೇ ಪಿಂಚಣಿದಾರರಿಗಾಗಿ ಒಂದು ಪೋರ್ಟಲ್ ಹೊಂದಿದ್ದು, ಪೋರ್ಟಲ್ ನಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಮೊಬೈಲ್ ಆ್ಯಪ್ ನಲ್ಲಿ ಒದಗಿಸುವ ಯೋಜನೆ ಹೊಂದಿದೆ.
ಸಿಬಂದಿ, ಸಾರ್ವಜನಿಕ ದೂರುಗಳು ಮತ್ತು ಪೆನ್‌ಶನ್‌ ಖಾತೆಯ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್‌ ಅವರು ಈ ನೂತನ ಆ್ಯಪನ್ನು ನಾಳೆ ಬಿಡುಗಡೆ ಮಾದಲಿದ್ದಾರೆ. ಈ ಆ್ಯಪ್‌ ನಿವೃತ್ತರಾಗಲಿರುವ ಕೇಂದ್ರ ಸರ್ಕಾರದ ಸುಮಾರು 300ಕ್ಕೂ ಅಧಿಕ ನೌಕರರಿಗೆ ಪ್ರಯೋಜನವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com