ರೋಹಿಂಗ್ಯಾಗಳು ಅಕ್ರಮ ವಲಸಿಗರು, ನಿರಾಶ್ರಿತರಲ್ಲ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಭಾರತದಲ್ಲಿ ಆಶ್ರಯ ಕೇಳಿರುವ ರೋಹಿಂಗ್ಯಾಗಳು ಅಕ್ರಮ ವಲಸಿಗರು, ಅವರು ನಿರಾಶ್ರಿತರಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
ನವದೆಹಲಿ: ಭಾರತದಲ್ಲಿ ಆಶ್ರಯ ಕೇಳಿರುವ ರೋಹಿಂಗ್ಯಾಗಳು ಅಕ್ರಮ ವಲಸಿಗರು,  ಅವರು ನಿರಾಶ್ರಿತರಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಯನ್ಮಾರ್ ಅವರನ್ನು ಒಪ್ಪಿಕೊಳ್ಳಲು ಬಯಸಿರುವಾಗ ಕೆಲವರು ಏಕೆ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರೋಹಿಂಗ್ಯಾಗಳು ನಿರಾಶ್ರಿತರಲ್ಲ, ಭಾರತದ ಆಶ್ರಯ ಕೇಳಿರುವ ಅವರು ಸರಿಯಾದ ರೀತಿ ನೀತಿ ಅನುಸರಿಸಿ ಇಲ್ಲಿಗೆ ಬಂದಿಲ್ಲ, ಅವರು ಅಕ್ರಮ ವಲಸಿಗರು ಎಂದು ಸ್ಪಷ್ಟ ಪಡಿಸಿದ್ದಾರೆ.
ರೋಹಿಂಗ್ಯಾಗಳ ವಿಷಯದಲ್ಲಿ ಭಾರತ ಯಾವುದೇ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. 
ಕೇಂದ್ರ ಸರ್ಕಾರ ಭಾರತದ ವಿವಿಧ ಭಾಗಗಳಲ್ಲಿರುವ ರೋಹಿಂಗ್ಯಾ ರನ್ನು ಗಡಿಪಾರು ಮಾಡಲು ಯೋಜಿಸುತ್ತಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ಮಾನವ ಹಕ್ಕುಗಳ ದೃಷ್ಟಿಯಿಂದ ನೋಡಿದರೇ, ಮಧ್ಯಸ್ಥಿಕೆ ವಹಿಸುವುದು ಸೂಕ್ತ ಎಂದು ಆಯೋಗ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com