ನವದೆಹಲಿ: ತೆರಿಗೆ ಇಲಾಖೆಯು ಆದಾಯ ತೆರಿಗೆ ಇಲಾಖೆಯು ಐಟಿ ಆರ್ ಸಲ್ಲಿಸಿದ, ಇತರ ಐ-ಟಿ ವ್ಯವಹಾರಗಳನ್ನು ಆನ್ ಲೈನ್ ನಲ್ಲಿ ನಡೆಸುವ ತನ್ನ ತೆರಿಗೆದಾರರಿಗೆ, ಅಧಿಕೃತ ಇ-ಫೈಲಿಂಗ್ ಪೋರ್ಟಲ್ ನಲ್ಲಿ ತಮ್ಮ ಪ್ರೊಫೈಲ್ ಮತ್ತು ಇತರೆ ಪ್ರಮುಖ ವಿವರಗಳನ್ನು ನವೀಕರಿಸಲು ಕೇಳಿದೆ.
ಖಾಸಗಿ ಮತ್ತು ಸೆಕೆಂದರಿ ಇಮೇಲ್ ಮತ್ತು ಮೊಬೈಲ್ ಫೋನ್ ಸಂಖ್ಯೆಗಳು, ವಿಳಾಸ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ತಮ್ಮ ಇತ್ತೀಚಿನ ಮಾಹಿತಿಯನ್ನು ಒದಗಿಸುವಂತೆ ತೆರಿಗೆದಾರರಿಗೆ ಇಲಾಖೆ ಕೇಳಿಕೊಂಡಿದೆ. ಇದರಿಂದ ತೆರಿಗೆ ಇಲಾಖೆ ಮತ್ತು ತೆರಿಗೆದಾರರ ನಡುವೆ ದ್ವಿಪಕ್ಷೀಯ ಸಂಬಂಧ ಉತ್ತಮವಾಗುತ್ತದೆ ಎಂದು ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.
ತೆರಿಗೆದಾರರು ಇಮೇಲ್ ಮೂಲಕ ಮತ್ತು ಎಸ್ ಎಂಎಸ್ ಮೂಲಕ ಒಂದು ಟೈಮ್ ಪಾಸ್ ವರ್ಡ್ (ಓಟಿಪಿ) ಅನ್ನು ಕಳುಹಿಸಿದ ನಂತರ ಈ ವಿವರಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಪ್ರತಿಕ್ರಿಯೆ ನೀದಲಾಗುತ್ತದೆ.
"ತೆರಿಗೆದಾರರು ಮತ್ತು ಇಲಾಖೆಯ ನಡುವೆ ಪರಿಣಾಮಕಾರಿ ಸಂವಹನವನ್ನು ಸುಲಭಗೊಳಿಸಲು ಈ ಹೊಸ ನೋಂದಣಿ ಪ್ರಕ್ರಿಯೆ ಅಗತ್ಯವಾಗಿದೆ. ಪ್ರಸ್ತುತ ಇ-ಫೈಲಿಂಗ್ ಬಳಕೆದಾರರು ಇ-ಫೈಲಿಂಗ್ ಖಾತೆಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಪ್ರೊಫೈಲ್ ಅನ್ನು ನವೀಕರಿಸುವುದು ಅಗತ್ಯವಿದೆ. ಈಗಾಗಲೇ ನೋಂದಾಯಿಸಲ್ಪಟ್ಟಿರುವ ಮತ್ತು ಸಕ್ರಿಯಗೊಳಿಸದ ಬಳಕೆದಾರರು ಈಗ ಪುನಃ ನೋಂದಾಯಿಸಬೇಕಾಗುತ್ತದೆ" ಎಂದು ತೆರಿಗೆ ಇಲಾಖೆ ಸಲಹೆಗಾರರು ತಿಳಿಸಿದ್ದಾರೆ.
ತೆರಿಗೆದಾರರು ತಮ್ಮ ವೈಯಕ್ತಿಕ ಇ-ಫೈಲಿಂಗ್ ಖಾತೆಯನ್ನು https://incometaxindiaefiling.gov.in/ ನಲ್ಲಿ ಲಾಗ್ ಇನ್ ಆಗುವ ಮೂಲಕ ನವೀಕರಿಸಬಹುದು.