ನವರಾತ್ರಿ ಆಚರಣೆ, ಗುರುಗ್ರಾಮದ ಮಾಂಸದಂಗಡಿ ಮೇಲೆ ಶಿವಸೇನೆ ದಾಳಿ

ನವರಾತ್ರಿ ಉತ್ಸವ ನಿಮಿತ್ತ ಶಿವಸೇನಾ ಕಾರ್ಯಕರ್ತರು ಗುರುಗ್ರಾಮದ 500 ಕ್ಕಿಂತ ಹೆಚ್ಚು ಮಾಂಸ ಮತ್ತು ಚಿಕನ್ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.
ಗುರುಗ್ರಾಮದ ಮಾಂಸದಂಗಡಿ ಮೇಲೆ ಶಿವಸೇನೆ ದಾಳಿ
ಗುರುಗ್ರಾಮದ ಮಾಂಸದಂಗಡಿ ಮೇಲೆ ಶಿವಸೇನೆ ದಾಳಿ
ಗುರುಗ್ರಾಮ: ನವರಾತ್ರಿ ಉತ್ಸವ ನಿಮಿತ್ತ ಶಿವಸೇನಾ ಕಾರ್ಯಕರ್ತರು ಗುರುಗ್ರಾಮದ  500 ಕ್ಕಿಂತ ಹೆಚ್ಚು ಮಾಂಸ ಮತ್ತು ಚಿಕನ್ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.
ನಮ್ಮ ಸೂಚನೆಗಳನ್ನು ಪಾಲಿಸದಿದ್ದರೆ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ "ಎಂದು ಗುರುಗ್ರಾಮದ ಶಿವಸೇನಾ ಘಟಕದ ಪ್ರಧಾನ ಕಾರ್ಯದರ್ಶಿ ರಿತು ರಾಜ್ ತಿಳಿಸಿದರು.
ಶಿವ ಸೇನಾ ಕಾರ್ಯಕರ್ತರು ನಗರದ ಮಾಂಸಾಹಾರ ಮಳಿಗೆಗಳ ಮಾಲೀಕರಿಗೆ ನೋಟೀಸ್ ನೀಡಿದ್ದು, ಒಂಭತ್ತು ದಿನ ನವರಾತ್ರಿಯು ಮುಗಿಯುವವರೆಗೆ ಅವರ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ.
ಪಾಲಮ್ ವಿಹಾರ್ ನಲ್ಲಿ ಸೇರಿದ ಶಿವಸೇನಾ ಕಾರ್ಯಕರ್ತರು ಸೂರತ್ ನಗರ, ಅಶೋಕ್ ವಿಹಾರ್, ಸೆಕ್ಟರ್ 5 ಮತ್ತು 9, ಪಟೌಡಿ ಚೌಕ್, ಜಾಕೋಬ್ ಪುರ, ಸದರ್ ಬಜಾರ್, ಖಂಡ್ಸಾ ಅನಜ್ ಮಂಡಿ, ಬಸ್ ನಿಲ್ದಾಣ, ಡಿಎಲ್ಎಫ್ ಪ್ರದೇಶ, ಸೋಹ್ನಾ ಮತ್ತು ಸೆಕ್ಟರ್ 14 ಮಾರುಕಟ್ಟೆಯಲ್ಲಿ ಮಾಂಸ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ. 
"ನವರಾತ್ರಿ ಕಾರಣ ಮುಂದಿನ 9 ದಿನಗಳಲ್ಲಿ ಕಚ್ಚಾ ಮಾಂಸದ ಅಂಗಡಿಗಳನ್ನು ಮುಚ್ಚುವ ಉದ್ದೇಶ ದಿಂದ ಗುರುಗ್ರಾಮ ಉಪ ಕಮೀಷನರ್ ವಿನಯ್ ಪ್ರತಾಪ್ ಸಿಂಗ್ ಗೆ ಮಂಗಳವಾರ ನಾವು ಮನವಿ ಸಲ್ಲಿಸಿದ್ದೇವೆ ಆದರೆ ಜಿಲ್ಲಾಡಳಿತವು ಮಾಂಸದ ಅಂಗಡಿ ಮಾಲೀಕರಿಗೆ ಅಂಗಡಿ ಮುಚ್ಚುವಂತೆ ಯಾವ ನಿರ್ದೇಶನ ನೀಡಿಲ್ಲ" ಎಂದು ರಾಜ್ ಹೇಳಿದರು.
"ನಾವು ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರೂ ಅಧಿಕಾರ ಹೊಂದಿಲ್ಲ, ಶಿವಸೇನೆಯ ಕಾರ್ಯಕರ್ತರು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರೆ, ನಾವು ಅವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಯಾರಾದರೂ ಈ ಬಗ್ಗೆ ದೂರು ನೀಡುವವರೆಗೂ ನಾವು ಕಾಯುತ್ತೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com