ರೋಹಿಂಗ್ಯಾಗಳ ನೆರವಿಗಾಗಿ ದುರ್ಗಾ ಪೂಜೆ ಖರ್ಚು ತಗ್ಗಿಸಿದ ಬಾಂಗ್ಲಾ ಹಿಂದೂಗಳು

ಬರ್ಮಾದಿಂದ ಬಾಂಗ್ಲಾದೇಶಕ್ಕೆ ಬಂದು ಆಶ್ರಯ ಪಡೆದಿರುವ ರೋಹಿಂಗ್ಯಾ ಮುಸ್ಲಿಮರಿಗೆ ನೆರವು ನೀಡಲು ಅಲ್ಲಿನ ಹಿಂದೂಗಳು ನಿರ್ಧರಿಸಿದ್ದು, ಇದಕ್ಕಾಗಿ ದುರ್ಗಾ ಪೂಜೆಯ ಖರ್ಚು ತಗ್ಗಿಸಲು ನಿರ್ಧರಿಸಿದ್ದಾರೆ.
ರೋಹಿಂಗ್ಯ ನಿರಾಶ್ರಿತರು
ರೋಹಿಂಗ್ಯ ನಿರಾಶ್ರಿತರು
ನವದೆಹಲಿ: ಬರ್ಮಾದಿಂದ ಬಾಂಗ್ಲಾದೇಶಕ್ಕೆ ಬಂದು ಆಶ್ರಯ ಪಡೆದಿರುವ ರೋಹಿಂಗ್ಯಾ ಮುಸ್ಲಿಮರಿಗೆ ನೆರವು ನೀಡಲು ಅಲ್ಲಿನ ಹಿಂದೂಗಳು ನಿರ್ಧರಿಸಿದ್ದು, ಇದಕ್ಕಾಗಿ ದುರ್ಗಾ ಪೂಜೆಯ ಖರ್ಚು ತಗ್ಗಿಸಲು ನಿರ್ಧರಿಸಿದ್ದಾರೆ. 
ಆ.25 ರಂದು ಬರ್ಮಾದಲ್ಲಿ ನಡೆದ ಹಿಂಸಾಚಾರದಿಂದ ರೋಹಿಂಗ್ಯಾ ಮುಸ್ಲಿಮರು ಬರ್ಮಾ ತೊರೆದು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮರಿಗೆ ನೆರವು ನೀಡಲು ಅಲ್ಲಿನ ಹಿಂದೂಗಳು ಮುಂದಾಗಿದ್ದು ದುರ್ಗಾ ಪೂಜೆಯ ಖರ್ಚುಗಳನ್ನು ತಗ್ಗಿಸಲು ನಿರ್ಧರಿಸಿದ್ದಾರೆ. 
ಮಾನವೀಇಯ ದೃಷ್ಟಿಯಿಂದ ರೋಹಿಂಗ್ಯಾದ ನಿರಾಶ್ರಿತರಿಗೆ ನಾವು ಸಹಕಾರ ನೀಡಲು ನಿರ್ಧರಿಸಿದ್ದೇವೆ ಎಂದು ದುರ್ಗಾ ಪೂಜೆಯ ಪರಿಷತ್ ನ ಕಾರ್ಯದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com