ಮಾಲೆಗಾಂವ್ ಸ್ಪೋಟ ಪ್ರಕರಣ: ಮೇಜರ್ ರಮೇಶ್ ಉಪಾದ್ಯಾಯಗೆ ಜಾಮೀನು

2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಮೇಜರ್ ರಮೇಶ್ ಉಪಾಧ್ಯಾಯಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಮೇಜರ್ ರಮೇಶ್ ಉಪಾದ್ಯಾಯ
ಮೇಜರ್ ರಮೇಶ್ ಉಪಾದ್ಯಾಯ
ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಮೇಜರ್ ರಮೇಶ್ ಉಪಾಧ್ಯಾಯಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ಸ್ಪೋಟ ಪ್ರಕರಣದಲ್ಲಿ ಉಪಾಧ್ಯಾಯ ಜಾಮೀನು ಅರ್ಜಿಯನ್ನು ಒಪ್ಪಿಕೊಳ್ಳುವ ಮೂಲಕ ಹೈಕೋರ್ಟ್ ನಿಂದ ಜಾಮೀನು ನೀಡಲಾಗಿದೆ. ನ್ಯಾಯಮೂರ್ತಿಗಳಾದ ರಂಜಿತ್ ಮೋರ್ ಮತ್ತು ಸಾಧನಾ ಜಾಧವ್ ಅವರು  1 ಲಕ್ಷ ದ ವ್ವೈಯಕ್ತಿಕ ಬಾಂಡ್ ಪಡೆದು ಜಾಮೀನು ನೀಡಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಕೀಲ ಸಂದೇಶ್ ಪಾಟೀಲ್ ಉಪಾದ್ಯಾಯ ಜಾಮೀನು ಅರ್ಜಿಯನ್ನು ವಿರೋಧಿಸಿದಾಗ, ಸುಪ್ರೀಂ ಕೋರ್ಟ್ ನಿರ್ದೇಶನದ ಅದರ ಕೈಗಳನ್ನು ಕಟ್ಟಿ ಹಾಕಿದೆ ಎಂದು ಹೈಕೋರ್ಟ್ ಪೀಠ ತಿಳಿಸಿದೆ.
ಸ್ಫೋಟದಲ್ಲಿ ಉಪಾದ್ಯಾಯ ಪಾತ್ರವು ಪ್ರಧಾನ ಆರೋಪಿ ಶ್ರೀಕಾಂತ್ ಪುರೋಹಿತ್ ಗಿಂತಲೂ ದೊಡ್ಡದಾಗಿದೆ ಎಂದು ಕೇಳಿದ ನ್ಯಾಯಾಲಯ, ಉಪಾಧ್ಯಾಯ ಪರ ವಕೀಲ ಅದನ್ನು ನಿರಾಕರಿಸಿದರು. "ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುರೋಹಿತ್ ಗೆ ಜಾಮೀನು ನೀಡಿದೆ ಮತ್ತು ಮುಂಬೈ ವಿಶೇಷ ನ್ಯಾಯಾಲಯವು ಇತರ ಇಬ್ಬರು ಆರೋಪಿಗಳಾದ , ಸುಧಕರ ಚತುರ್ವೇದಿ ಮತ್ತು ಸುಧಕರ್ ಧಾರ್ ದ್ವಿವೇದಿ ಅವರನ್ನು ಪ್ರಕರಣದಿಂದ ಹೊರಗುಳಿಸಿತ್ತು, ಹೀಗಾಗಿ ಉಪಾಧ್ಯಾಯ ಗೆ ಜಾಮೀನು ನೀಡಬೇಕು" ಎಂದು ವಾದಿಸಿದರು.
ಎನ್ ಐಎ ತನ್ನ ಆರೋಪ ಪಟ್ಟಿಯಲ್ಲಿ, ಉಪಾಧ್ಯಾಯ ಮತ್ತು ಪುರೋಹಿತ್ ನಡುವೆ ಫೋನ್ ಸಂಭಾಷಣೆ ವಿವರಗಳನ್ನು ಪ್ರಕರಣದ ಪ್ರಮುಖ ಪುರಾವೆ ಎಂದು ತಿಳಿಸಿತ್ತು.
2008 ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪುರೋಹಿತ್ ಗೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಜಾಮೀನು ನೀಡಿದೆ. ಸೆಪ್ಟೆಂಬರ್ 29, 2008 ರಂದು ಉತ್ತರ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಾಲೆಗಾಂವ್  ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com