ಬಿಎಸ್ಎಫ್ ಆಪರೇಷನ್ ಅರ್ಜುನ್ ಕಾರ್ಯಾಚರಣೆ: ಗಡಿ ಕೇಂದ್ರ, ಪಾಕ್ ಅಧಿಕಾರಿಗಳ ನಿವಾಸಗಳೇ ಟಾರ್ಗೆಟ್!

ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಆಪರೇಷನ್ ಅರ್ಜುನ್ ಕಾರ್ಯಾಚರಣೆ ಮೂಲಕ ಪಾಠ ಕಲಿಸಲು ಮುಂದಾಗಿದೆ
ಗಡಿ ಭದ್ರತಾ ಸಿಬ್ಬಂದಿ
ಗಡಿ ಭದ್ರತಾ ಸಿಬ್ಬಂದಿ
ನವದೆಹಲಿ: ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತದ ಗಡಿ ಭದ್ರತಾ ಸಿಬ್ಬಂದಿಗಳು ಆಪರೇಷನ್ ಅರ್ಜುನ್ ಕಾರ್ಯಾಚರಣೆ ಮೂಲಕ ಪಾಠ ಕಲಿಸಲು ಮುಂದಾಗಿದ್ದು, ಪಾಕ್ ನ ಗಡಿ ಕೇಂದ್ರಗಳು, ಪಾಕಿಸ್ತಾನದ ಅಧಿಕಾರಿಗಳ ನಿವಾಸಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಭಾರತದ ಗಡಿ ಪ್ರದೇಶದಲ್ಲಿ ಜನತೆಯ ಮೇಲೆ ಗುಂಡು ಹಾರಿಸಿ, ಶೆಲ್ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತ ಅದರದ್ದೇ  ಭಾಷೆಯಲ್ಲಿ ಉತ್ತರ ನೀಡಲು ಮುಂದಾಗಿದ್ದು, ಪಾಕಿಸ್ತಾನದ ಅಧಿಕಾರಿಗಳ ನಿವಾಸಗಳನ್ನೇ ಟಾರ್ಗೆಟ್ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 
ಗಡಿ ಭದ್ರತಾ ಸಿಬ್ಬಂದಿಗಳು ಪಾಕಿಸ್ತಾನದ ಭಾಷೆಯಲ್ಲೇ ಉತ್ತರಿಸಲು ಪ್ರಾರಂಭಿಸಿರುವುದರಿಂದ ಪಾಕ್ ಗೆ ತೀವ್ರ ಹಾನಿ ಉಂಟಾಗಿದ್ದು, ಪಾಕಿಸ್ತಾನ ಮೂರು ದಿನಗಳ ಹಿಂದೆ ಕದನ ವಿರಾಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾಕಿಸ್ತಾನ ತನ್ನ ನಿವೃತ್ತ ಸೇನಾ ಅಧಿಕಾರಿಗಳು, ಐಎಸ್ಐ ಹಾಗೂ ಪಾಕಿಸ್ತಾನ ರೇಂಜರ್ಸ್ ಅಧಿಕಾರಿಗಳಿಗೆ ಭಾರತದ ಗಡಿ ಪ್ರದೇಶದ ಹತ್ತಿರವೇ ಭೂಮಿ ನೀಡಿದ್ದು, ಭಾರತದ ಗಡಿಯೊಳಗೆ ನುಸುಳಲು ಭಯೋತ್ಪಾದಕರಿಗೆ ಈ ನಿವೃತ್ತ ಅಧಿಕಾರಿಗಳು ಸಹಾಯ ಮಾಡುತ್ತಿದ್ದರು ಈ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧರು ಗಡಿ ಪ್ರದೇಶದ ಹತ್ತಿರವೇ ಇರುವ ಪಾಕಿಸ್ತಾನದ ನಿವೃತ್ತ ಅಧಿಕಾರಿಗಳ ನಿವಾಸಗಳನ್ನೇ ಟಾರ್ಗೆಟ್ ಮಾಡಿ ಆಪರೇಷನ್ ಅರ್ಜುನ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com