ನಾಳೆ ನಾನು ಮೃತಪಟ್ಟರೆ ಜೆಡಿಯುಗೆ ಏನಾಗುತ್ತದೆ?: ನಿತೀಶ್ ಕುಮಾರ್

ನಾಳೆ ಒಂದು ವೇಳೆ ನಾನು ಮೃತಪಟ್ಟರೆ ಜೆಡಿಯು ಪಕ್ಷಕ್ಕೆ ಏನಾಗುತ್ತದೆ? ಹೀಗೆಂದು ಕೇಳಿದ್ದು ಜೆಡಿಯು ರಾಷ್ಟ್ರಾಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್.
ನಿತೀಶ್ ಕುಮಾರ್
ನಿತೀಶ್ ಕುಮಾರ್
Updated on
ಪಾಟ್ನಾ: ನಾಳೆ ಒಂದು ವೇಳೆ ನಾನು ಮೃತಪಟ್ಟರೆ ಜೆಡಿಯು ಪಕ್ಷಕ್ಕೆ ಏನಾಗುತ್ತದೆ? ಹೀಗೆಂದು ಕೇಳಿದ್ದು ಜೆಡಿಯು ರಾಷ್ಟ್ರಾಧ್ಯಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. 
ಹೌದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಿತೀಶ್ ಕುಮಾರ್ ಹೀಗೆ ಕೇಳಿ ಸಭಿಕರ ಹುಬ್ಬೇರುವಂತೆ ಮಾಡಿದ್ದಾರೆ. ಆದರೆ ತಮ್ಮ ಹೇಳಿಕೆಗೆ ಸ್ಥಳದಲ್ಲಿಯೇ ಸ್ಪಷ್ಟನೆ ನೀಡಿರುವ ನಿತೀಶ್ ಕುಮಾರ್ ತಮ್ಮ ಹೇಳಿಕೆಯನ್ನು ಹಗುವಾಗಿ ಪರಿಗಣಿಸಬೇಕು, ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದೂ ಹೇಳಿದ್ದಾರೆ. 
" ನಾಳೆ ಏನಾಗುತ್ತದೋ ಯಾರಿಗೆ ಗೊತ್ತು? ನಾನು ಇರುವವರೆಗೆ ಬಿಹಾರದಲ್ಲಿ ಮದ್ಯ ನಿಷೇಧ ನಿರ್ಧಾರವನ್ನು ವಾಪಸ್ ಪಡೆಯುವುದಿಲ್ಲ. ಯಾರಿಗಾದರೂ ಸಮಸ್ಯೆ ಇದ್ದರೆ, ಅವರು ನನ್ನನ್ನು ಹತ್ಯೆ ಮಾಡಬೇಕಷ್ಟೇ, ನಾನು ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com