ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ 7ವರ್ಷದ ಪಾಕಿಸ್ತಾನಿ ಬಾಲಕಿಗೆ ಭಾರತಕ್ಕೆ ಬರಲು ವೈದ್ಯಕೀಯ ವೀಸಾ ಒದಗಿಸಿದ್ದಾರೆ. .ಭಾರತದಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸಲಿರುವ ಪಾಕಿಸ್ತಾನಿ ಬಾಲಕಿಗೆ ಸುಷ್ಮಾ ವೀಸಾ ನೀಡಿದ್ದಾರೆ..ಸಹಾಯ ಕೇಳಿ ಸುಷ್ಮಾಗೆ ಟ್ವೀಟ್ ಮಾಡಿದ್ದ ಬಾಲಕಿಯ ತಾಯಿ ನೈದಾ ಶೋಯಬ್ ಕೋರಿಕೆಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್ 'ನಾವೂ ಸಹ ಬಾಲಕಿ ಬೇಗ ಗುಣವಾಗಲೆಂದು ಆಶಿಸುತ್ತೇವೆ' ಎಂದಿದ್ದಾರೆ..ಆಗಸ್ಟ್ ನಿಂದ ತನ್ನ ಮನವಿ ಬಾಕಿ ಉಳಿದಿದೆ ಎಂದಿರುವ ನೈದಾ ಶೋಯೆಬ್ ತಮ್ಮ ವೀಸಾ ಸ್ಕ್ಯಾನ್ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ..ಜೂನ್ ತಿಂಗಳಲ್ಲಿ, ನಾಲ್ಕು ತಿಂಗಳ ಪಾಕಿಸ್ತಾನಿ ಮಗು ರೋಹಾನ್ ಗೆ ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಪದಲು ಸಚಿವರು ಸಹಾಯ ಮಾಡಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos