"ಸಿನ್ಹಾ ಹೇಳಿದ ಮೇಲಾದರೂ ಸರ್ಕಾರ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳುತ್ತದೆಯೇ?" : ಚಿದಂಬರಂ ಪ್ರಶ್ನೆ

"ಆಡಳಿತ ಪಕ್ಷ ಏನನ್ನೇ ಹೇಳಲಿ, ಸಿನ್ಹಾ ಹೇಳಿಕೆಯಲ್ಲಿ ಸತ್ಯಾಂಶವಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: "ಆಡಳಿತ ಪಕ್ಷ ಏನನ್ನೇ ಹೇಳಲಿ, ಸಿನ್ಹಾ ಹೇಳಿಕೆಯಲ್ಲಿ ಸತ್ಯಾಂಶವಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದರು. ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಆಡಳಿತಾರೂಢ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ಮಾಡಿದ ಆರೋಪದ ಬಳಿಕ ಚಿದಂಬರಂ ತಮ್ಮ ನಿಲುವನ್ನು ಹೊರಹಾಕಿದ್ದಾರೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಮಾಜಿ ಹಣಕಾಸು ಮಂತ್ರಿ ಸಿನ್ಹಾ  ಬರೆದ ಲೇಖನದಲ್ಲಿ ಆರ್ಥಿಕ ಬೆಳವಣಿಗೆಯ ಕುಸಿತಕ್ಕಾಗಿ ತಮ್ಮ ಸ್ವಂತ ಸರ್ಕಾರವನ್ನು ಟೀಕಿಸಿದ್ದರು. ಇದು ಸಾಮಾಜಿಕ ತಾನಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು.
"ಯಶವಂತ್ ಸಿನ್ಹಾ ಸತ್ಯವನ್ನು ಹೇಳಿದ್ದಾರೆ, ಆರ್ಥಿಕತೆಯು ಕುಸಿಯುತ್ತಿರುವ ಸತ್ಯವನ್ನು ಇದೀಗ ಆದಳಿತಗಾರರು ಒಪ್ಪಿಕೊಳ್ಳುವಿರಾ?" "ಇದು ಶಾಶ್ವತವಾದ ಸತ್ಯ: ಏನು ಆದಳಿತ ಪಕ್ಷ ಏನೇ ಹೇಳಲಿ, ಅಂತಿಮವಾಗಿ ಸತ್ಯವು ಮೇಲುಗೈ ಸಾಧಿಸಿದೆ" ಚಿದಂಬರಂ ಪ್ರಶ್ನಿಸಿದ್ದಾರೆ
ಲೇಖನದಲ್ಲಿ, 'ನಾನು ಈಗ ಮಾತನಾಡಬೇಕಿದೆ' ಎಂಬ ಶೀರ್ಷಿಕೆಯಡಿಯಲ್ಲಿ ಸಿನ್ಹಾ, "ಅಪನಗದೀಕರಣ ಆರ್ಥಿಕ ಅವಘಡಕ್ಕೆ ಕಾರನವಾಗಿದೆ" ಮತ್ತು ಅಪನಗದೀಕರಣ  ಮತ್ತು ಸರಕು, ಸೇವೆಗಳ ತೆರಿಗೆ (ಜಿಎಸ್ಟಿ) ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿವೆ" ಎಂದು ಹೇಳಿದ್ದಾರೆ.
"ಹಣಕಾಸು ಸಚಿವರು  ಮಾಡಿದ ಆರ್ಥಿಕ ಅವ್ಯವಸ್ಥೆಗೆ ವಿರುದ್ಧವಾಗಿ ನಾನು ಇನ್ನೂ ಮಾತನಾಡದಿದ್ದಲ್ಲಿ ನಾನು ನನ್ನ ರಾಷ್ಟ್ರೀಯ ಕರ್ತವ್ಯದಲ್ಲಿ ಸೋಲಬೇಕಾಗುತ್ತದೆ" ಎಂದು ಲೇಕನದಲ್ಲಿ ಸಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ. ಆರ್ಥಿಕತೆಯು ಕುಸಿತಕ್ಕೆ ಬಿಜೆಪಿಯಲ್ಲಿರುವ ಹಲವರು ಮಾತನಾಡಲು ಧೈರ್ಯ ತೋರಿಸುತ್ತಿಲ್ಲ. ಅವರೆಲ್ಲಾ ಪಕ್ಷದ ಕೇಂದ್ರದ ಶಕ್ತಿಯ ಭಯವಿದೆ. "ಅರುಣ್ ಜೇಟ್ಲಿಯವರು ಈ ಸರ್ಕಾರದಲ್ಲಿ ಅತ್ಯುತ್ತಮ ಸಚಿವರೆಂದು ಪರಿಗಣಿತರಾಗಿದ್ದಾರೆ. ಆದರೆ 2014ರ ಚುನಾವಣೆಗಳಿಗೆ ಮುನ್ನವೇ ಜೇಟ್ಲಿ ಮುಂದಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗುವುದು ಸ್ಪಷ್ಟವಾಗಿತ್ತು. "
ಜಿಡಿಪಿ ದರದಲ್ಲಿನ ಕುಸಿತಕ್ಕೆ 'ತಾಂತ್ರಿಕ' ಕಾರಣಗಳನ್ನು ಉದಾಹರಿಸಿ ಸಿನ್ಹಾ ಮತ್ತಷ್ಟು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ತರಾಟೆಗೆ ತೆಗೆದುಕೊಂಡರು "ದೇಶದ ಅತ್ಯಂತ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ ಬಿಐ ಸಹ ಅಸಾಮಾನ್ಯ ಪ್ರಾಂಕ್ ನೆಸ್ ನೊಂದಿಗೆ ಹೇಳಿದೆ, ಈ ಕುಸಿತವು ಅಸ್ಥಿರವಾದದ್ದು ಅಥವಾ" ತಾಂತ್ರಿಕತೆಯು ದೊಷದಿಂದ ಉಂಟಾಗಿದೆ" ಎಂದಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆಯನ್ನು ಸಿನ್ಹಾ ಟೀಕಿಸಿದ್ದಾರೆ.
ಆ ನಿಟ್ಟಿನಲ್ಲಿ, ಕಳೆದ ತಿಂಗಳು ಬಿಡುಗಡೆಯಾದ 2017-18 ರ ಹಣಕಾಸಿನ ಮೊದಲ ತ್ರೈಮಾಸಿಕ ವರದಿಯಲ್ಲಿ , ಜಿಡಿಪಿ ಬೆಳವಣಿಗೆಯ ದರವು 5.7 ಪ್ರತಿಶತದಷ್ಟು ಇಳಿಮುಖವಾಗಿದೆ ಎಂದು ತೋರಿಸಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಶೇ 7.6 ರಷ್ಟಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com