ಐಐಟಿ ದೆಹಲಿ ಹಾಸ್ಟೆಲ್ ನ ಉಪಹಾರದ ಚಟ್ನಿಯಲ್ಲಿ ಸತ್ತ ಇಲಿ ಪತ್ತೆ!

ಹಾಸ್ಟೆಲ್ ಗಳಲ್ಲಿ ಊಟ ತಿಂಡಿ ಚೆನ್ನಾಗಿ, ರುಚಿಕಟ್ಟಾಗಿರುವುದು ವಿರಳ. ಆದರೆ ಮೊನ್ನೆ ಮಂಗಳವಾರ...
ಬೆಳಗಿನ ಉಪಹಾರಕ್ಕೆ ಪೂರೈಕೆಯಾದ ತಿಂಡಿ(ಫೋಟೋ ಕೃಪೆ: ಫೇಸ್ ಬುಕ್/ ಜಶನ್ ಸೂರಿ)
ಬೆಳಗಿನ ಉಪಹಾರಕ್ಕೆ ಪೂರೈಕೆಯಾದ ತಿಂಡಿ(ಫೋಟೋ ಕೃಪೆ: ಫೇಸ್ ಬುಕ್/ ಜಶನ್ ಸೂರಿ)
ನವದೆಹಲಿ: ಹಾಸ್ಟೆಲ್ ಗಳಲ್ಲಿ ಊಟ ತಿಂಡಿ ಚೆನ್ನಾಗಿ, ರುಚಿಕಟ್ಟಾಗಿರುವುದು ವಿರಳ. ಆದರೆ ಮೊನ್ನೆ ಮಂಗಳವಾರ ಐಐಟಿ ದೆಹಲಿಯ ಹಾಸ್ಚೆಲ್ ನ ಬೆಳಗಿನ ಉಪಹಾರದಲ್ಲಿ ಸತ್ತ ಇಲಿಯೊಂದು ಸಿಕ್ಕಿದೆ. ಅರಾವಳಿ ಹಾಸ್ಚೆಲ್ ನ ಉಪಹಾರದಲ್ಲಿ ಸತ್ತ ಇಲಿಯೊಂದು ಸಿಕ್ಕಿರುವ ಬಗ್ಗೆ ವಿದ್ಯಾರ್ಥಿಯೊಬ್ಬರು ವರದಿ ಮಾಡಿದ್ದಾರೆ.
ವಿಶ್ವವಿದ್ಯಾಲಯದ ಡೀನ್ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದು ಆ ಬಳಿಕ ಈ ಬಗ್ಗೆ ವಿಚಾರಣೆ ನಡೆಸುವಂತೆ ಸಮಿತಿಯೊಂದನ್ನು ರಚಿಸಲಾಗಿದೆ.
ವಿದ್ಯಾರ್ಥಿ ಈ ವಿಷಯವನ್ನು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಐಐಟಿ ದೆಹಲಿಯ ಹಾಸ್ಟೊಲೊಂದರಲ್ಲಿ ಬೆಳಗಿನ ಉಪಹಾರದ ಚಟ್ನಿಯಲ್ಲಿ ಸತ್ತ ಇಲಿ ಸಿಕ್ಕಿದೆ. ಇಲಿ ಹಲವು ರೋಗಗಳನ್ನು, ವೈರಸ್ ಗಳನ್ನು ಹರಡುತ್ತದೆ. ಅಂತಹುದರಲ್ಲಿ ತಿನ್ನುವ ಆಹಾರದಲ್ಲಿ ಸತ್ತ ಇಲಿ ಸಿಕ್ಕಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಜನರಿಗೆ ಹಾಸ್ಟೆಲ್ ನ ಸತ್ಯ ಸಂಗತಿ ಗೊತ್ತಾಗಲಿ. ನಾವು ಶೈಕ್ಷಣಿಕ ಒತ್ತಡವನ್ನು ಮಾತ್ರ ಎದುರಿಸಬೇಕಾದ್ದಲ್ಲದೆ ವಿಷಪೂರಿತ ಆಹಾರ, ಡೆಂಗ್ಯು, ಕಾಲರಾ, ಅಜೀರ್ಣ, ಬೇಧಿ ಮೊದಲಾದ ಕಾಯಿಲೆಗಳನ್ನು ಬರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ 11 ಗಂಡು ಮಕ್ಕಳ ಮತ್ತು 3 ಹೆಣ್ಣು ಮಕ್ಕಳ ಹಾಸ್ಟೆಲ್ ಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com