ಮತದಾರರ ಪಟ್ಟಿ ಪರಿಷ್ಕರಣೆ: ಮಾಜಿ ಪ್ರಧಾನಿ ವಾಜಪೇಯಿ ಹೆಸರು ಹೊರಕ್ಕೆ

ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್‌‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಲಖ್ನೋ ಮುನಿಸಿಪಲ್ ಕಾರ್ಪೋರೇಷನ್ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ,
ಅಟಲ್ ಬಿಹಾರಿ ವಾಜಪೇಯಿ,
Updated on: 
ಲಖ್ನೋ: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್‌‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಲಖ್ನೋ ಮುನಿಸಿಪಲ್ ಕಾರ್ಪೋರೇಷನ್ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
"ಕಾನೂನು ಪ್ರಕಾರ ಯಾರೇ ಆದರೂ ನೊಂದಾಯಿತ ವಿಳಾಸದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ನೆಲೆಸದೆ ಹೋದಲ್ಲಿ ಅಂತಹಾ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶವಿದೆ" ಎಂದು ಲಖ್ನೋ ವಲಯ ಚುನಾವಣಾಧಿಕಾರಿ  ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ವಾಜಪೇಯಿ ಹಲವು ವರ್ಷಗಳಿಂದ ಲಕ್ನೋದಲ್ಲಿ ವಾಸವಾಗಿಲ್ಲವಾದ್ದರಿಂದ ಅವರ ಹೆಸರನ್ನು  ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ" ಎಂದು ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಪೀಡಿತರಾಗಿದ್ದಾರೆ. ಅವರು ನವದೆಹಲಿಯಲ್ಲಿ ವಾಸವಾಗಿದ್ದಾರೆ. ಸದ್ಯ ಲಖ್ನೋ ದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ಮತದಾರರ ಪಟ್ಟಿ ಬಿಡುಗಡೆಗೊಂಡಿದೆ. ಹೊಸ ಪಟ್ಟಿಯಿಂದ ವಾಜಪೇಯಿ ಹೆಸರನ್ನು ತೆಗೆದುಹಾಕಲಾಗಿದೆ.
2004ರ ಲೋಕಸಭಾ ಚುನಾವಣೆ ನಂತರ ವಾಜಪೇಯಿ ಇಲ್ಲಿ ಮತ ಚಲಾವಣೆ ಮಾಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com