ಮುಂಬೈ ಮೇಲ್ಸೇತುವೆ ದುರಂತ: ಇಂತಹ ಅಪಘಾತ ನಡೆಯುವ ಸಾಧ್ಯತೆ ನಿಶ್ಚಿತವಾಗಿತ್ತು: ಸ್ಥಳೀಯರು

ಸಂಭವಿಸಿದ ದುರಂತಕ್ಕೆ ಕಾರಣ ಯಾರು ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ವದಂತಿಯೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಮುಂಬೈ ಮೇಲ್ಸೇತುವೆ ದುರಂತ
ಮುಂಬೈ ಮೇಲ್ಸೇತುವೆ ದುರಂತ
ಮುಂಬೈ ನ ಎಲ್'ಫಿನ್'ಸ್ಟೋನ್ ರೈಲ್ವೇ ನಿಲ್ದಾಣದ ಬಳಿ ಇರುವ ಪಾದಾಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ದುರಂತಕ್ಕೆ ಕಾರಣ ಯಾರು ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ವದಂತಿಯೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ.  
ಮೇಲ್ಸೇತುವೆ ಕುಸಿಯುತ್ತಿದೆ... ಎಂಬ ವದಂತಿಯೇ ಕಾಲ್ತುಳಿತ ಉಂಟಾಗಲು ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸೇತುವೆ ಮೇಲೆ ನಡೆದುಹೋಗುತ್ತಿದ್ದ ಜನರು ಕೂಗುತ್ತಿದ್ದದ್ದು ಕೇಳಿಸಿತು. ಇದರಿಂದ ಗಾಬರಿಗೊಳಗಾದ ಜನತೆ ಜೀವ ಉಳಿಸಿಕೊಳ್ಳುವುದಕ್ಕೆ ಓಡಲು ಪ್ರಾರಂಭಿಸಿದರು. ಇದರಿಂದಲೇ ಕಾಲ್ತುಳಿತ ಉಂಟಾಗಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ
 ಎಲ್'ಫಿನ್'ಸ್ಟೋನ್ ರೈಲ್ವೆ ನಿಲ್ದಾಣದ ಬಳಿ ಇರುವ ಪಾದಚಾರಿಗಳ ಮೇಲ್ಸೇತುವೆ ದುರ್ಬಲವಾಗಿದೆ ಎಂದು 2015 ರಲ್ಲೇ ಕೇಂದ್ರ ರೈಲ್ವೆ ಹೇಳಿತ್ತು. ಸ್ಥಳೀಯರೂ ಸಹ ಇಂತಹ ಅಪಘಾತ ಎಂದಾದರೂ ಒಂದು ದಿನ ನಡೆಯುವುದು ನಿಶ್ಚಿತ ಎಂಬ ಆತಂಕದಲ್ಲಿಯೇ ಇದ್ದರು. "ಪ್ರತಿದಿನ ಈ ಮೇಲ್ಸೇತುವೆ ಮೇಲೆ ನಡೆದು ಹೋಗುವವರು ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಿತ್ತು. ಜನ ಸಂಚಾರ ಹೆಚ್ಚಿದ್ದ ಸಂದರ್ಭದಲ್ಲಿ ಮೇಲ್ಸೇತುವೆ ಮೇಲೆ ನಡೆದು ಹೋಗುವುದು ಯುದ್ಧ ಮಾದರಿಯ ಪರಿಸ್ಥಿತಿಯಂತೆ ಇರುತ್ತಿತ್ತು ಎಂದು ಮೇಲ್ಸೇತುವೆ ದುರಂತ ನಡೆದ ಪ್ರದೇಶದ ಸ್ಥಳೀಯರಾದ ಅರುಣ್ ತಿವಾರಿ ಹೇಳಿದ್ದಾರೆ. 
ಮೇಲ್ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಹೆಲ್ಪ್ ಲೈನ್ ನಂಬರ್ ಗಳನ್ನು ನೀಡಲಾಗಿದ್ದು, ಈ ಕೆಳಕಂಡಂತೆ ಇವೆ. 
ಕೆಇಎಂ ಆಸ್ಪತ್ರೆ: 022-24107000
ವೆಸ್ಟ್ರನ್ ರೈಲ್ವೆ ಕಂಟ್ರೋಲ್ ರೂಂ-022 - 23070564, 022-23017379, 022-23635959
ಮುಂಬೈ ರೈಲ್ವೆ ಕಂಟ್ರೋಲ್ ರೂಂ: 022-23081725
ಟ್ರಾಫಿಕ್ ಹೆಲ್ಪ್ ಲೈನ್ ವಾಟ್ಸ್ ಆಪ್ ನಂಬರ್: 8454999999

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com