ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ನ ಅಧ್ಯಕ್ಷ ಮಹಮ್ಮದ್ ಯಾಸೀನ್ ಮಲಿಕ್ ನ್ನು ಇಂದು ಬಂಧಿಸಲಾಗಿದೆ.
ಮಲಿಕ್ ಮತ್ತು ಜೆಕೆಎಲ್ ಎಫ್ ಸಂಘಟನೆಯ ಇನ್ನೋರ್ವ ನಾಯಕ ಬಶೀರ್ ಅಹಮ್ಮದ್ ನನ್ನು ಶ್ರೀನಗರದ ಅಬಿ ಗುಜಾರ್ ಪ್ರದೇಶದಲ್ಲಿ ಪೋಲೀಸರು ಬಂಧಿಸಿದ್ದಾರೆ. ಬಂಧಿತರಾದ ಇಬ್ಬರನ್ನೂ ಶ್ರೀನಗರದ ಸೆಂಟ್ರಲ್ ಜೈಲಿಗೆ ಸ್ಥಳಂತರಿಸಲಾಗಿದೆ.
ಅಕ್ಟೋಬರ್ 1 ರಂದು ಮೊಹರಂ ತಿಂಗಳ 10 ನೇ ದಿನದಂದು ಕಣಿವೆ ರಾಜ್ಯದಲ್ಲಿ ಮೊಹರಂ ಮೆರವಣಿಗೆಗೆ ನಡೆಯಲಿದ್ದು ಇದಕ್ಕೆ ಎರಡು ದಿನಗಳ ಮುಂಚಿತವಾಗಿ ಮಲಿಕ್ ಬಂಧನವಾಗಿದೆ