ಕುವೈತ್: 15 ಬಾರತೀಯರ ಗಲ್ಲು ಶಿಕ್ಷೆ ಜೀವಾವಧಿಗೆ ಇಳಿಕೆ, ಸುಷ್ಮಾ ಸ್ವರಾಜ್ ಟ್ವೀಟ್
ಗಲ್ಲುಶಿಕ್ಷೆಗೆ ಗುರಿಯಾಗಿ ಬಂಧಿಯಾಗಿರುವ 15 ಭಾರತೀಯರ ಶಿಕ್ಷೆಯನ್ನು ಅಲ್ಲಿನ ರಾಜ ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ನವದೆಹಲಿ: ಗಲ್ಲುಶಿಕ್ಷೆಗೆ ಗುರಿಯಾಗಿ ಬಂಧಿಯಾಗಿರುವ 15 ಭಾರತೀಯರ ಶಿಕ್ಷೆಯನ್ನು ಅಲ್ಲಿನ ರಾಜ ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಕುವೈತ್ ನ ರಾಜ ಜಬರ್ ಅಲ್ ಅಹಮ್ಮದ್ ಅಲ್ ಸಬಾಹ್ ಭಾರತೀಯ ಖೈದಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಆದೇಶಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ನಲ್ಲಿ ಹೇಳಿದ್ದಾರೆ.
HH the Emir of Kuwait has been pleased to commute the sentence of 15 Indian nationals from death to life imprisonment. /1
ಇದರೊಡನೆ, 119 ಭಾರತೀಯ ಕೈದಿಗಳ ಶಿಕ್ಷೆ ಪ್ರಮಾಣವನ್ನು ಸಹ ಕಡಿತಗೊಳಿಸಿದ್ದಾರೆ. ಭಾರತೀಯರ ಪರವಾಗಿ ಕುವೈತ್ ರಾಜರಿಗೆ ಸುಷ್ಮಾ ಧನ್ಯವಾದ ಹೇಳಿದ್ದಾರೆ. ಜೈಲಿನಿಂದ ಬಿಡುಗಡೆಯಾಗಲಿರುವ ಭಾರತೀಯರಿಗೆ ರಾಯಭಾರ ಕಛೇರಿ ಅಧಿಕಾರಿಗಳು ಸೂಕ್ತ ನೆರವು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.