ನಿಮ್ಮ ಘನತೆಗೆ ಚ್ಯುತಿ ತರುವವರನ್ನು ಫಾಲೋ ಮಾಡಬೇಡಿ: ಪ್ರಧಾನಿಗೆ ಪತ್ರಕರ್ತನ ಬಹಿರಂಗ ಪತ್ರ

ಎನ್ ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಮೋದಿಯನ್ನು ನಿಂದಿಸುವವರ....
ಪತ್ರಕರ್ತ ರವೀಶ್ ಕುಮಾರ್
ಪತ್ರಕರ್ತ ರವೀಶ್ ಕುಮಾರ್
Updated on
ನವದೆಹಲಿ: ಎನ್ ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಮೋದಿಯನ್ನು ನಿಂದಿಸುವವರ ವಿರುದ್ಧ ಕಿಡಿ ಕಾರಿದ್ದಾರೆ. 
ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿ ವಿರುದ್ಧ ನಿಂದಾನಾತ್ಮಕ ಭಾಷೆ ಬಳಸುವವರನ್ನು ಟೀಕಿಸಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ಸೇರಿದ ನಂತರ ಅದರಲ್ಲಿ ಬಳಸುವ ಪದಗಳನ್ನು ತಮ್ಮ ಬ್ಲಾಗ್ ಸ್ಪಾಟ್ ನಯ್ ಸಾಧಕ್ ನಲ್ಲಿ  ರವೀಶ್ ಕುಮಾರ್ ಉಲ್ಲೇಖಿಸಿದ್ದಾರೆ. ಜೊತೆಗೆ ಮೋದಿ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಹೆಸರನ್ನು ಅದರಲ್ಲಿ ಬಹಿರಂಗ ಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ,ನಿಮ್ಮ ಘನತೆಗೆ ಚ್ಯುತಿ ತರುವವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನುಸರಿಸದಿರುವಂತೆ ಸಲಹೆ ನೀಡಿದ್ದಾರೆ. ನೀವು ನಿಮ್ಮ ಕೆಲಸದ ಒತ್ತಡದಲ್ಲಿ ನಿರತರಾಗಿರುತ್ತೀರಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆಯ ಮಟ್ಟ ತೀರಾ ಕೆಟ್ಟದಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ,  ನಿಮ್ಮ ನಾಯಕತ್ವದಲ್ಲಿರುವ ಸಂಘಟನೆಯ ಸದಸ್ಯರು ಇದನ್ನು ಮಾಡುತ್ತಿದ್ದಾರೆ. ನಿಮ್ಮ ಬೆಂಬಲಿಗರು ನಿಮ್ಮ ವಿರೋಧಿಗಳಾಗುತ್ತಿದ್ದಾರೆ. ಅಂಥವರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ.
ನಿಮ್ಮ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು, ಇಂಥಹ ಭಾಷೆ ಬಳಸಲಾಗುತ್ತಿದೆ, ನೀವು ಪ್ರಧಾನ ಮಂತ್ರಿಯಾಗಿರುವುದಜರಿಂದ ಇದರ ಬಗ್ಗೆ ಗಮನ ಹರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಕಾರ್ಯದ ಒತ್ತಡದ ನಡುವೆ ಇದರ ಬಗ್ಗೆ ಗಮನ ಹರಿಸುವುದು ಕಷ್ಟವಾಗಬಹುದು, ಆದರೆ ನಿಮ್ಮ ತಂಡ ಅಂಥವರನ್ನ ಟ್ವಿಟ್ಟರ್ ನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಲಿ ಎಂದು ಬರೆದಿದ್ದಾರೆ.
ಭಾರತದ ಪ್ರಜೆಯಾಗಿದ್ದುಕೊಂಡು ಪ್ರಧಾನಿಯೊಬ್ಬರನ್ನು ನಿಂದಿಸುವವರನ್ನು ಸಹಿಸಬಾರದು ಎಂದು ಹೇಳಿದ್ದಾರೆ.
ಪ್ರಧಾನಿ ಅವರ ಬಗ್ಗೆ ವಾಟ್ಸಾಪ್ ಗ್ರೂಪ್ ನಲ್ಲಿ ಕೆಲ ಪತ್ರಕರ್ತರು ಅವಹೇಳನಕಾರಿಯಾಗಿ ಮಾತನಾಡಿರುವುದು ನನಗೆ ಭಯ ಮೂಡಿಸುತ್ತದೆ. ಹಲವರು ಕೆಟ್ಟ ಭಾಷೆ ಬಳಸಿದ್ದರೂ ಅದು ಕೇಳದಂತೆ ಕಿವುಡರಾಗಿದ್ದಾರೆ, ಕೆಲ ಮಹಿಳಾ ಪತ್ರಕರ್ತರು ಬಳಸಿರುವ  ಭಾಷೆ ನಿಜಕ್ಕೂ ಅವಮಾನಕರ . ಅವರು ನಿಜವಾಗಿಯೂ ಕೋಮುವಾದಿಗಳು,  ಅವರನ್ನೆಲ್ಲಾ ನೀವುೂ ಸಹಿಸಿಕೊಳ್ಳಬಾರದು ಎಂದು ಬರೆದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಇಂಥಹ ಭಾಷೆ ಬಳಸಿರುವುದಕ್ಕೆ ನನಗೆ ತುಂಬಾ ನೋವಾಗಿದೆ ಅದಕ್ಕಾಗಿ ಕ್ಷಮೆ ಇರಲಿ, ನಾನು ವಾಟ್ಸಾಪ್ ಗ್ರೂಪ್ ನಿಂದ ಹೊರ ಬಂದರೂ ಕೆಲವರು ಮತ್ತೆ ನನ್ನನ್ನು ಅದಕ್ಕೆ ಸೇರಿಸುತ್ತಿದ್ದಾರೆ, ಅವರು ಬಳಸಿರುವ ಭಾಷೆಗಳನ್ನು ನಾನು ಹಂಚಿಕೊಳ್ಳಲು ಬಯಸುವುದಿಲ್ಲ, ಏಕೆಂದರೆ ನಾನು ಪ್ರದಾನ ಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದೇನೆ, ಇದನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com