ಇಂಡೋ-ಟಿಬೆಟಿಯನ್ ಗಡಿ ಪೋಲೀಸರೊಡನೆ ದಸರಾ ಆಚರಿಸಿದ ರಾಜನಾಥ್ ಸಿಂಗ್

ಉತ್ತರಾಖಂಡದ ಜ್ಯೋತಿರ್ಮಠದಲ್ಲಿ ಇಂಡೋ-ಟಿಬೇಟಿಯನ್ ಗಡಿ ಪೋಲಿಸ್ (ಐಟಿಬಿಪಿ) ಪಡೆಯ ಜವಾನರೊದನೆ ಕೇಂದ್ರ ಗೃಹ ಸಚಿವ ರಾಜನಾಠ್ ಸಿಂಗ್ ದಸರಾವನ್ನು ಆಚರಿಸಿದರು.
ಇಂಡೋ-ಟಿಬೆಟಿಯನ್ ಗಡಿ ಪೋಲಿಸ್ (ಐಟಿಬಿಪಿ) ಒಡನೆ ರಾಜನಾಥ್ ಸಿಂಗ್
ಇಂಡೋ-ಟಿಬೆಟಿಯನ್ ಗಡಿ ಪೋಲಿಸ್ (ಐಟಿಬಿಪಿ) ಒಡನೆ ರಾಜನಾಥ್ ಸಿಂಗ್
ಉತ್ತರಾಖಂಡ: ಉತ್ತರಾಖಂಡದ ಜ್ಯೋತಿರ್ಮಠದಲ್ಲಿ ಇಂಡೋ-ಟಿಬೇಟಿಯನ್ ಗಡಿ ಪೋಲಿಸ್ (ಐಟಿಬಿಪಿ) ಪಡೆಯ ಜವಾನರೊದನೆ ಕೇಂದ್ರ ಗೃಹ ಸಚಿವ ರಾಜನಾಠ್ ಸಿಂಗ್ ದಸರಾವನ್ನು ಆಚರಿಸಿದರು.
ಸಿಕ್ಕಿಂ ಗಡಿಯ ಡೊಕ್ಲಾಮ್ ಪ್ರದೇಶದಲ್ಲಿ ಗಡಿ ಉದ್ವಿಗ್ನ ಪರಿಸ್ಥಿತಿ ತಿಳಿಯಾದ ನಂತರ ಚೀನಾ ಗಡಿ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಭೇಟಿ ನೀಡಿದ್ದಾರೆ.
ಐಟಿಬಿಪಿ ಜವಾನರೊಡನೆ ಸಂವಾದ ನಡೆಸಿದ ಗೃಹ ಸಚಿವರು, "ಭಾರತ ಮತ್ತು ಚೀನಾ ನಡುವಿನ ಸಕಾರಾತ್ಮಕ ಮಾತುಕತೆಯ ಮೂಲಕ ಡೊಕ್ಲಾಮ್ ವಿವಾದವನ್ನು ಪರಿಹರಿಸಲಾಗಿದೆ" ಎಂದು ಹೇಳಿದರು.
"ಅಂತರರಾಷ್ಟ್ರೀಯ ಗಡಿ ಸಮಸ್ಯೆಯನ್ನು ರಚನಾತ್ಮಕ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿದೆ ಎಂದು ನಾನು ಭಾವಿಸುತ್ತೇನೆ" ಸಿಂಗ್ ಹೇಳಿದರು.
ಭಾರತ- ಚೀನಾ ಗಡಿಯಲ್ಲಿನ ಐಟಿಬಿಪಿಯ ರಿಂಖಿಂ ನೆಲೆಗೆ ಸಿಂಗ್ ಭೇಟಿ ನೀಡಿದ್ದರು.
 90,000 ಸಿಬ್ಬಂದಿ  ಹೊಂದಿರುವ ಐಟಿಬಿಪಿ ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಐದು ರಾಜ್ಯಗಳಲ್ಲಿ 3,488 ಕಿ.ಮೀ ಉದ್ದದ ಸಿನೊ-ಭಾರತ ಗಡಿಯನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com