ಪತಂಜಲಿ ಸಂಸ್ಥೆಗೆ ತಮ್ಮ ನಂತರ ಉತ್ತರಾಧಿಕಾರಿ ಯಾರೆಂಬುದನ್ನು ಬಹಿರಂಗಪಡಿಸಿದ ಬಾಬಾ ರಾಮ್ ದೇವ್

ಪತಂಜಲಿ ಸಂಸ್ಥೆಗೆ ತಮ್ಮ ನಂತರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ವತಃ ರಾಮ್ ದೇವ್ ಮಾಹಿತಿ ನೀಡಿದ್ದು, ಸಂಸ್ಥೆಯನ್ನು ತಮ್ಮ ನಂತರ ನೋಡಿಕೊಳ್ಳಲು 500 ಸನ್ಯಾಸಿಗಳಿಗೆ ತರಬೇತಿ....
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
ನವದೆಹಲಿ: ಬಾಬಾ ರಾಮ್ ದೇವ್ ಯೋಗ ಗುರುವಾಗಿದ್ದರೂ 10,000 ಕೋಟಿ ರೂಪಾಯಿ ಮೌಲ್ಯದ ಪತಂಜಲಿ ಸಂಸ್ಥೆಯನ್ನು ನಿರ್ಮಿಸಿ ಮುನ್ನಡೆಸುತ್ತಿದ್ದಾರೆ. ಬಾಬಾ ರಾಮ್ ದೇವ್ ಸನ್ಯಾಸಿಯಾಗಿರುವುದರಿಂದ ಸಂಸ್ಥೆಗೆ ಅವರ ನಂತರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಇದ್ದೇ ಇದೆ. 
ಪತಂಜಲಿ ಸಂಸ್ಥೆಗೆ ತಮ್ಮ ನಂತರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ವತಃ ರಾಮ್ ದೇವ್ ಮಾಹಿತಿ ನೀಡಿದ್ದು, ಸಂಸ್ಥೆಯನ್ನು ತಮ್ಮ ನಂತರ ನೋಡಿಕೊಳ್ಳಲು 500 ಸನ್ಯಾಸಿಗಳಿಗೆ ತರಬೇತಿ ನೀಡುತ್ತಿರುವುದಾಗಿ ರಾಮ್ ದೇವ್ ತಿಳಿಸಿದ್ದಾರೆ. 
ಟಾಕ್ ಶೋ ಒಂದರಲ್ಲಿ ಈ ಬಗ್ಗೆ ಮಾತನಾಡಿರುವಾ ಬಾಬಾ ರಾಮ್ ದೇವ್, ಮುಂದಿನ 2 ವರ್ಷಗಳಲ್ಲಿ ಪತಂಜಲಿ 1 ಲಕ್ಷ ಕೋಟಿ ಉತ್ಪಾದನೆಯ ಸಾಮರ್ಥ್ಯ ಪಡೆಯಲಿದೆ ಫಾಸ್ಟ್-ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ವಿಭಾಗದಲ್ಲಿ (ಎಫ್ಎಂಸಿಜಿ ಸೆಕ್ಟರ್) ನಲ್ಲಿ  ಪತಂಜಲಿ ಪ್ರಮುಖ ಸಂಸ್ಥೆಯಾಗುವ ಹಾದಿಯಲ್ಲಿದೆ. ಮುಂದಿನ 4 ವರ್ಷಗಳಲ್ಲಿ ಪತಂಜಲಿ ಎಫ್ಎಂಸಿಜಿ ಬ್ರಾಂಡ್ ನಲ್ಲಿ ಪ್ರಮುಖ ಸಂಸ್ಥೆಯಾಗಲಿದ್ದು, ಸುಮಾರು 500 ಸಾಧುಗಳು ನನ್ನ ಉತ್ತರಾಧಿಕಾರಿಗಳಾಗಲಿದ್ದಾರೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com