ಜಯಲಲಿತಾ ಸಾವಿನ ಬಗ್ಗೆ ಇಪಿಎಸ್, ಒಪಿಎಸ್ ಮೌನವೇಕೆ: ಕಾಂಗ್ರೆಸ್ ಪ್ರಶ್ನೆ?

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತಾದ ರಹಸ್ಯದ ಬಗ್ಗೆ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಸಿಎಂ ಪನೀರ್ ಸೆಲ್ವಂ ಈಗ ಏಕೆ ಮೌನವಾಗಿದ್ದಾರೆ ...
ಜಯಲಲಿತಾ
ಜಯಲಲಿತಾ
ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತಾದ  ರಹಸ್ಯದ ಬಗ್ಗೆ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಸಿಎಂ ಪನೀರ್ ಸೆಲ್ವಂ ಈಗ ಏಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 
ಈ ಸಂಬಂಧ ಸುದ್ದಿಸಂಸ್ಥಯೊಂದಿಗೆ ಮಾತನಾಡಿರುವ ತಮಿಳುನಾಡು ಕಾಂಗ್ರೆಸ್ ಮುಖ್ಯಸ್ಥ ತಿರುವನವಕ್ಕೂರ್ ಜಯಲಲಿತಾ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದ ಪನ್ನೀರ್ ಸೆಲ್ವಂ ಈಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈಗಿನ ಮುಖ್ಯಮಂತ್ರಿ ಅಂದು ಜಯಲಲಿತಾರನ್ನು ಭೇಟಿಯಾಗಿದ್ದರೇ ಎಂದು ನಮಗೆ ಸ್ಪಷ್ಟತೆಯಿಲ್ಲ. ಅಂದು ಇದೇ ಪಳನಿಸ್ವಾಮಿ ಜಯಲಲಿತಾ ಸಂಪುಟದ ಪ್ರಮುಖ ಸಚಿವರಾಗಿದ್ದರು. ಹೀಗಾಗಿ ಸಿಎಂ ಮತ್ತು ಡಿಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಡೆದಿದ್ದೇನೆಂದು ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಕೇಳಿದ್ದಾರೆ. 
ಕಳೆದ ವರ್ಷಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಸಾವನ್ನಪ್ಪಿದ್ದರು. ಜಯಲಲಿತಾ ಸಾವಿನ ತನಿಖೆ ನಡೆಸಲು ತಮಿಳುನಾಡು ಸರ್ಕಾರ ಮುರಿತ ವೈದ್ಯರ ತನಿಖಾ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com