ನಾರಾಯಣ್ ರಾಣೆ
ನಾರಾಯಣ್ ರಾಣೆ

ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ನಾರಾಯಣ್ ರಾಣೆ ಯಿಂದ ಹೊಸ ರಾಜಕೀಯ ಪಕ್ಷದ ಘೋಷಣೆ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ್ ಟಿ. ರಾಣೆ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಎನ್ನುವ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದರು.
ಮುಂಬಯಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ್ ಟಿ. ರಾಣೆ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಎನ್ನುವ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದರು. ಇದು ರಾಜ್ಯದ ಎಲ್ಲ ಕ್ಷೇತ್ರಗಳ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ.
ಶಿವಸೇನೆಯಲ್ಲಿ  ಮತ್ತು 12 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿಯೂ ಇದ್ದ ಕೊಂಕಣ ಕರಾವಳಿ ಪ್ರದೇಶದ ಹಿರಿಯ ಮುಖಂಡ ರಾಣೆ  ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ ಡಿಎ) ಸೇರಲಿದ್ದಾರೆಂದು ರಾಜಕೀಯ ವಿಶ್ಲೇಷಕರು ಊಹಿಸಿದ್ದರು.
"ಎಲ್ಲ ಬದ್ದತೆಗಳೊಡನೆ ರಾಜ್ಯದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದು, ಸಧ್ಯದ ನಡೆಯಾಗಿದೆ, ಪಕ್ಷದ ಸಂಘಟನೆ ಬಳಿಕ ಭವಿಷ್ಯದ ಕಾರ್ಯಸೂಚಿಗಳ ಬಗ್ಗೆ ಯೋಚಿಸುತ್ತೇವೆ. ಇದರಲ್ಲಿ ಎನ್ ಡಿಎ ಜೊತೆ ಸೇರುವ ವಿಚಾರ ಸಹ ಇರಲಿದೆ" ಎಂದು ರಾಣೆ ಹೇಳಿದರು.
ಆಡಳಿತ ಪಕ್ಷ ಶಿವಸೇನಾ ವಿರುದ್ಧ ಹರಿಹಾಯ್ದ ರಾಣೆ ಕೇಂದ್ರದ ಬುಲೆಟ್ ರೈಲು ಯೋಜನೆ ಒಂದು ಅಭಿವೃದ್ಧಿ ಕಾರ್ಯವಾಗಿದೆ. ಇದು ದೇಶಕ್ಕೆ ಅಗತ್ಯವಿದೆ. ಜನರಿಗೆ ಇದರಿಂದ ಮೊಬೈಲ್ ಫೋನ ನಷ್ಟೇ ಅನುಕೂಲವಾಗಲಿದೆ ಎಂದರು.
1995 ರಿಂದ 1999 ರವರೆಗೂ ರಾಜ್ಯವನ್ನು ಆಳಿದ ಶಿವಸೇನಾ-ಬಿಜೆಪಿ ಮೈತ್ರಿಕೂಟದಲ್ಲಿ ಸುಮಾರು ಒಂದು ವರ್ಷ (1999) ಮುಖ್ಯಮಂತ್ರಿಯಾಗಿದ್ದ ರಾಣೆ 2005 ರಲ್ಲಿ ಕಾಂಗ್ರೆಸ್ ಗೆ ಸೇರಿದ್ದರು.
ಎಂಎಸ್ ಪಿ ಹುಟ್ಟಿನೊಂದಿಗೆ  ಅವರ ಮೂರನೇ ರಾಜಕೀಯ ಇನ್ನಿಂಗ್ ಪ್ರಾರಂಭಗೊಂಡಿದೆ. ರಾಣೆ ಅವರ ಸ್ವಂತ ಜಿಲ್ಲೆ  ಸಿಂಧುದುರ್ಗ ದಲ್ಲಿ ಡ್ರಮ್ಸ್ ಬಾರಿಸಿ, ಪತಾಕಿ ಸಿಡಿಸುವ ಮೂಲಕ ತಮ್ಮ ನಾಯಕನ ಹೊಸ ಪಕ್ಷದ ಉದಯವನ್ನು ಸಂಭ್ರಮಿಸಿದರು.

Related Stories

No stories found.

Advertisement

X
Kannada Prabha
www.kannadaprabha.com