ದುಬೈ ನಲ್ಲಿದ್ದ ಮುಂಬೈ ಮೂಲದ ವ್ಯಕ್ತಿಯಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಆರ್ಥಿಕ ನೆರವು!

ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದನೆ ನಿಗ್ರಹ ತಂಡದ ಅಧಿಕಾರಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಆರ್ಥಿಕ ನೆರವು ನೀಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ
ನವದೆಹಲಿ: ಗೌಪ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಭಯೋತ್ಪಾದನೆ ನಿಗ್ರಹ ತಂಡದ ಅಧಿಕಾರಿಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಆರ್ಥಿಕ ನೆರವು ನೀಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. 
ಇಸ್ಲಾಮಿಕ್ ಉಗ್ರ ಸಂಘಟನೆಗೆ ಹಣಕಾಸಿನ ನೆರವನ್ನು ಒದಗಿಸುತ್ತಿದ್ದ ದುಬೈ ನಲ್ಲಿರುವ ಮುಂಬೈ ಮೂಲದ ವ್ಯಕ್ತಿಯಿಂದ (ಎಂಬಿಎ ಪದವೀಧರ) ಕಳೆದ ವರ್ಷ 40 ಲಕ್ಷ ರೂಪಾಯಿ ಹಣವನ್ನು ಉಗ್ರ ಸಂಘಟನೆ ಪಡೆದಿರುವುದನ್ನು ರಾಜಸ್ಥಾನ ಭಯೋತ್ಪಾಅದನೆ ನಿಗ್ರಹ ತಂಡದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 
ಮುಂಬೈ ಮೂಲದ ಅಬು ನಬಿಲ್ (ನಿಜವಾದ ಹೆಸರು ಜಮೀಲ್) ಪ್ರಕರಣ ಕೇವಲ ಒಂದು ಸಣ್ಣ ಸುಳಿವಾಗಿದ್ದು, ಇನ್ನೂ ಹೆಚ್ಚಿನ ಅಂಶಗಳು ಬಹಿರಂಗವಾಗಲಿದೆ ಎಂದು ರಾಜಸ್ಥಾನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಸಂದಾಯವಾಗುತ್ತಿದ್ದ ಹಣಕಾಸಿನ ನೆರವು ರಖ್ಕಾ ಮತ್ತು ಅನ್ಬರ್ ಪ್ರಾಂತ್ಯಗಳ ಉಗ್ರರಿಗೆ ತಲುಪುತ್ತಿತ್ತು ಎಂದು ತಿಳಿದುಬಂದಿದ್ದು, ತನಿಖೆಯಲ್ಲಿ ಮತ್ತಷ್ಟು ಭಾರತೀಯರ ಹೆಸರೂ ಇದ್ದು, ಅವರನ್ನು ಭಾರತ-ಬಾಂಗ್ಲಾದೇಶ ಹಾಗೂ ಯುಎಇ ನಡುವೆ ಕೊರಿಯರ್ ಗಳಂತೆ ಬಳಕೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. 
ಕಳೆದ ವರ್ಷ ಅಕ್ಟೋಬರ್ ನಲ್ಲಿ ಎಟಿಎಸ್ ಅಧಿಕಾರಿಗಳು ದುಬೈ ಮೂಲದ ಕಂಪ್ಯೂಟರ್ ನ ಕಂಟ್ರೋಲ್ ಸಿಸ್ಟಮ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ದುಬೈ ನಿಂದ ಸರಾಜೆವೊಗೆ ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುತ್ತಿದ್ದ 9,000 ಡಾಲರ್ ಗಳ ಹಣ ವರ್ಗಾವಣೆಯ ಪ್ರಕರಣವನ್ನು ಪತ್ತೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com