ಪ್ರಶ್ನೆಪತ್ರಿಕೆ ಸೋರಿಕೆ: ಸಿಬಿಎಸ್ಇ ನಿಲುವು ಸ್ಪಷ್ಟನೆಗೆ ದೆಹಲಿ ಹೈಕೋರ್ಟ್ ಮನವಿ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧಿಸಿ ಸಿಬಿಎಸ್ಇ ನಿಲುವೇನೆಂದು ತಿಳಿಸಲು ದೆಹಲಿ ಹೈಕೋರ್ಟ್ ಮನವಿ ಮಾಡಿದೆ.
ಸಿಬಿಎಸ್ಇ ವಿದ್ಯಾರ್ಥಿಗಳು ನವದೆಹಲಿಯ ಜಂತರ್ ಮಂತರ್ ನಲಿ  ಪ್ರಶ್ನೆ ಪತ್ರಿಕೆಯ ಸೋರಿಕೆಯ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ
ಸಿಬಿಎಸ್ಇ ವಿದ್ಯಾರ್ಥಿಗಳು ನವದೆಹಲಿಯ ಜಂತರ್ ಮಂತರ್ ನಲಿ ಪ್ರಶ್ನೆ ಪತ್ರಿಕೆಯ ಸೋರಿಕೆಯ ಕುರಿತು ಪ್ರತಿಭಟನೆ ನಡೆಸುತ್ತಿದ್ದಾರೆ
ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧಿಸಿ ಸಿಬಿಎಸ್ಇ  ನಿಲುವೇನೆಂದು ತಿಳಿಸಲು ದೆಹಲಿ ಹೈಕೋರ್ಟ್ ಮನವಿ ಮಾಡಿದೆ.
ಹಂಗಾಮಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತೆಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನೊಳಗೊಂಡ ಪೀಠವು ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು 10ನೇ ತರಗತಿಯ ಗಣಿತ  ವಿಷಯ ಪುನರ್ ಪರೀಕ್ಷೆ ನಡೆಸುವ ಯೋಜನೆ ಕುರಿತಂತೆ ತಿಳಿಸಬೇಕೆಂದು ಕೇಳಿದೆ.
10 ಮತ್ತು 12ನೇ ತರಗತಿಯ ಗಣಿತ ಹಾಗೂ ಅರ್ಥಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯ ಮೇಲ್ವಿಚಾರಣಾ ತನಿಖೆ ನಡೆದಿದ್ದು ಈ ಸಂಬಂಧ ನ್ಯಾಯಾಲಯವು ಮನವಿ ಮಾಡಿದೆ.
ಸೋಷಿಯಲ್ ಜ್ಯೂರಿಸ್ಟ್ ಎನ್ನುವ ಎನ್ಜಿಒ ಸಿಬಿಎಸ್ಇ ಯು ಜುಲೈನಲ್ಲಿ 10 ನೇ ತರಗತಿ ಗಣಿತದ ಮರು ಪರೀಕ್ಷೆ ನಡೆಸುವ ಬದಲು ಏಪ್ರಿಲ್ ನಲ್ಲೇ ನಡೆಸಏಕೆಂದು ಮನವಿ ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಮರು ಪರೀಕ್ಷೆ ಬರೆವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಗಳನ್ನು   ನೀಡಬೇಎಂ ಆದೇಶಿಸುವಂತೆ ವಕೀಲ ಅಶೋಕ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com