ಏಪ್ರಿಲ್ -ಜೂನ್ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚಲಿದೆ ಬಿಸಿಲಿನ ಬೇಗೆ!

: ಈ ಬಾರಿಯ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಬಿಸಿಲ ಬೇಗೆ ಏರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಈ ಬಾರಿಯ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಬಿಸಿಲ ಬೇಗೆ ಏರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಬರುವ ಬೇಸಿಗೆಯಲ್ಲಿ ಸಾಧಾರಣ ತಾಪಮಾನ ಇರಲಿದೆ ಎಂದು ನೀರಿಕ್ಷಿಸಲಾಗಿತ್ತು, ಆದರೆ ಪೂರ್ವದ ಉಪವಿಭಾಗಗಳಲ್ಲಿ ಮತ್ತು ಕೇಂದ್ರ ಹಾಗೂ ದೇಶದ ಹಲವು ಭಾಗಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ತಾಪಾಮಾನ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 
ಆದರೆ ಕೆಲವು ಉಪ ವಿಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನ ಕಡಿಮೆ ಇರಲಿದೆ. ಜಮ್ಮು ಕಾಶ್ಮೀರ,  ಪಂಜಾಬ್, ಹರ್ಯಾಣ, ಚಂಡಿಗಡ ದೆಹಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸಾಧಾರಣಕ್ಕಿಂತ ಹೆಚ್ಚಿನ ಬೇಗೆ ಕಾಡಲಿದೆ, ಸುಮಾರು 1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗಲಿದೆ. 
ಇನ್ನೂ ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ ಪೂರ್ವ ಮತ್ತು ಪಶ್ಷಿಮ ರಾಜಸ್ಥಾನಗಳಲ್ಲಿ 0 ಡಿಗ್ರಿ ಸೆಲ್ಸಿಯಸ್ ನಿಂದ 1 ಡಿಗ್ರಿ ವರೆಗೆ ತಾಪಮಾನ ಏರಲಿದೆ ಎಂದು ಹೇಳಲಾಗಿದೆ. 2017 ಅತಿ ಹೆಚ್ಚು ತಾಪಮಾನದ ವರ್ಷ ಎಂದು ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com