ಗ್ರಾಹಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ!

ಪೆಟ್ರೋಲ್‌, ಡೀಸಿಲ್‌, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ದಿನೇ ದಿನೇ ಏರುತ್ತಿರುವ ಈ ಸಂದರ್ಭದಲ್ಲಿ ತೈಲ ಕಂಪೆನಿಗಳು ಸಹಾಯಧನ ರಹಿತವಾದ ಎಲ್‌ಪಿಜಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪೆಟ್ರೋಲ್‌, ಡೀಸಿಲ್‌, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಗಳು ದಿನೇ ದಿನೇ ಏರುತ್ತಿರುವ ಈ ಸಂದರ್ಭದಲ್ಲಿ  ತೈಲ ಕಂಪೆನಿಗಳು ಸಹಾಯಧನ ರಹಿತವಾದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 35.50 ರೂ.ಗಳಷ್ಟು ಇಳಿಕೆ ಮಾಡಿವೆ.
ಮಾರ್ಚ್‌ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ಎಲ್‌ಪಿಜಿ ಬೆಲೆ ಇಳಿಕೆ ಉಂಟಾಗಿದ್ದಾಗ ತೈಲ ಕಂಪೆನಿಗಳು ಅದರ ಲಾಭವನ್ನು ಸಹಾಯಧನ ವಿಲ್ಲದ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇಳಿಸಿದ್ದವು. ಇದೀಗ ಅದೇ ರೀತಿಯ ಇಳಿಕೆಯನ್ನು ಒಂದೇ ತಿಂಗಳಲ್ಲಿ ಎರಡನೆ ಬಾರಿಗೆ ಕಡಿಮೆ ಮಾಡಿವೆ. 19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಈಗಿನ್ನು 54 ರೂ. ನಷ್ಟು ಅಗ್ಗವಾಗಲಿದೆಯಾದರೆ 5 ಕಿಲೋ ತೂಕದ ಸಿಲಿಂಡರ್‌ 15ರೂ. ನಷ್ಟು ಅಗ್ಗವಾಗಿದೆ. 
14.2 ಕಿಲೋ ತೂಕದ ಸಹಾಯಧನದ ಎಲ್‌ಪಿಜಿ ಸಿಲಿಂಡರ್‌ಗಳು ದೇಶದಲ್ಲಿನ ಗ್ರಾಹಕರಿಗೆ ವರ್ಷಕ್ಕೆ 12 ಸಿಗುತ್ತಿವೆ. ಇದಕ್ಕೆ ಮೀರಿದ ಯಾವುದೇ ಬೇಡಿಕೆಯನ್ನು ಗ್ರಾಹಕರು ಸಹಾಯ ಧನ ರಹಿತ ಸಿಲಿಂಡರ್‌ಗಳನ್ನು ಪಡೆದುಕೊಳ್ಳುವ ಮೂಲಕ ಪೂರೈಸಿಕೊಳ್ಳಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com