ಸಿಬಿಎಸ್ಇ ಮರು ಪರೀಕ್ಷೆಗೆ ವಿರೋಧ: ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಸಿಬಿಎಸ್ಇ 10, 12 ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಸಿಬಿಎಸ್ಇ
ಸಿಬಿಎಸ್ಇ
ನವದೆಹಲಿ: ಸಿಬಿಎಸ್ಇ 10, 12 ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. 
ದೀಪಕ್ ಮಿಶ್ರಾ, ಎಎಂ ಖನ್ವಾಲಿಕರ್ ಹಾಗೂ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಅರ್ಜಿಗಳ ವಿಚಾರಣೆಯನ್ನು ಏ.4 ರಂದು ನಡೆಸಲಿದೆ. ಇನ್ನು ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್, 10 ನೇ ತರಗತಿಯ ಪರೀಕ್ಷೆಯನ್ನು ಪುನಃ ನಡೆಸುವ ಯೋಜನೆಯ ಬಗ್ಗೆ ಸಿಬಿಎಸ್ಇ ಯನ್ನು ಕೇಳಿದೆ. 
ಕೇರಳದ ರೋಹನ್ ಎಂಬ ವಿದ್ಯಾರ್ಥಿ  ಸಿಬಿಎಸ್ಇ ಮರುಪರೀಕ್ಷೆ ಬಗ್ಗೆ ತ್ವರಿತ ವಿಚಾರಣೆ ನಡೆಯಬೇಕೆಂದು ಆಗ್ರಹಿಸಿದ್ದು, ಸಿಬಿಎಸ್ಇ ನಿರ್ಧಾರವನ್ನು ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾನೆ. ಅಷ್ಟೇ ಅಲ್ಲದೇ ಈಗಾಗಲೇ ನಡೆದಿರುವ ಪರೀಕ್ಷೆಗೆ ಅನುಗುಣವಾಗಿ ಫಲಿತಾಂಶವನ್ನು ಪ್ರಕಟಿಸುವಂತೆ ಸಿಬಿಎಸ್ಇ ಗೆ ನಿರ್ದೇಶನ ನೀಡಬೇಕೆಂದೂ ವಿದ್ಯಾರ್ಥಿ ಕೋರಿದ್ದಾನೆ. 
12 ನೇ ತರಗತಿಯ ಅರ್ಥಶಾಸ್ತ್ರ ಪತ್ರಿಕೆಗೆ ಏ.25 ರಂದು ಮರು ಪರೀಕ್ಷೆ ನಡೆಸುವುದಾಗಿ ಸಿಬಿಎಸ್ ಇ ತಿಳಿಸಿದೆ. ಇನ್ನು 10 ನೇ ತರಗತಿಯ ಗಣಿತ ಪತ್ರಿಕೆಗೆ ಜೂನ್ ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com